ಜೀವನಕ್ಕೆ ಉಪಯೋಗವಾಗುವ ಶಿಕ್ಷಣ ಬೇಕು

bkt-6-4
ಬಾಗಲಕೋಟೆ ನಗರದ ವಿದ್ಯಾ ಪ್ರಸಾರಕ ಮಂಡಳ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿದರು. ವಿ.ವೈ.ಕವಠೇಕರ, ಡಾ.ಗಿರೀಶ ಮಸೂರಕರ, ಶ್ರೀಲತಾ ಹೆರಂಜಲ್ ಇದ್ದರು.
Published on

ಬಾಗಲಕೋಟೆ: ಶಾಲೆಯಲ್ಲಿ ನೀಡುವ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ಉಪಯೋಗವಾಗುವಂತಿರಬೇಕು. ಅಲ್ಲಿ ಕಲಿತ ವಿದ್ಯೆ ಬದುಕು ಕಟ್ಟಿಕೊಳ್ಳÀಲು ನೆರವಾಗುವಂತಿರಬೇಕು ಎಂದು ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ನಗರದ ವಿದ್ಯಾ ಪ್ರಸಾರಕ ಮಂಡಳ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿತ್ಯ ಜೀವನದಲ್ಲಿ ಉಪಯೋಗ ಹಾಗೂ ಅನ್ವಯವಾಗಬಲ್ಲ ಶಿಕ್ಷಣದ ಅವಶ್ಯಕತೆ ಇದೆ. ಅದು ವಿದ್ಯಾರ್ಥಿಗಳ ಭವಿಷ್ಯದಲ್ಲಿನ ಉಪಜೀವನಕ್ಕೆ ಸಹಕಾರಿಯಾಗುತ್ತದೆ ಎಂದರು.

ಶಿಕ್ಷಕ ವೃತ್ತಿ ಕೇವಲ ವೃತ್ತಿಯಾಗದೇ ಸೇವೆಯಾಗಬೇಕು. ಶಿಕ್ಷಣದಲ್ಲಿ ಹಿಂದೆ ಬೀಳುವ ವಿದ್ಯಾರ್ಥಿಗಳನ್ನು ಸೂಕ್ತ ಮಾರ್ಗದರ್ಶನ ನೀಡಿ ಮೇಲೆಕ್ಕೆತ್ತುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು. ವಿದ್ಯಾರ್ಥಿಗಳ ಜೀವನವನ್ನು ಬದಲಾಯಿಸುವ ಶಕ್ತಿ ಶಿಕ್ಷಕರಿಗಿದೆ ಎಂದು ಹೇಳಿದರು.

ಸಕ್ರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಯಾಗಿರುವ ಭಾಂಡಗೆ ಅವರು ತಮ್ಮ ಶಾಲಾ ದಿನ ಹಾಗೂ ಸಮರ್ಪಣಾ ಭಾವದ ಶಿಕ್ಷಕರ ಬೋಧನಾ ವೈಖರಿಯನ್ನು ನೆನಪಿಸಿಕೊಳ್ಳುತ್ತ, ಈ ಶಾಲೆ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನೂ ನೀಡಿದೆ ಎಂದರು. ಈ ಸಂಸ್ಥೆಯ ಅಭಿವೃದ್ಧಿಗೆ ತಾವು ಅವಶ್ಯಕ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.

ಗೌರವ ಕಾರ್ಯದರ್ಶಿ ಡಾ. ಗಿರೀಶ ಮಸೂರಕರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವಿ.ವೈ.ಕವಠೇಕರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರಂಜಲ್, ಸದಸ್ಯರಾದ ವಿಜಯಾನಂದ ಬುರ್ಲಿ, ಡಾ. ಜೆ.ಎಸ್.ದೇಶಪಾಂಡೆ, ಎಸ್.ಕೆ.ಕುಲಕರ್ಣಿ, ಡಾ. ಎಮ್.ಜಿ ದೀಕ್ಷಿತ್, ಸುÃರ ದೇವದಾಸ, ಡಾ.ಆರ್.ವಿ. ಜೋಶಿ ಮತ್ತಿತರರು ಇದ್ದರು. ಪ್ರಾಚಾರ್ಯ ಶ್ರೀನಿವಾಸ ನರಗುಂದ ಪರಿಚಯಿಸಿದರು. ಡಾ.ಉಮೇಶ ತಿಮ್ಮಾಪೂರ ನಿರೂಪಿಸಿದರು. ಡಾ.ಪಿ.ಆರ್.ಜೋಶಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net