

ಅಫಜಲಪುರ: ಪುರಾಣ ಪ್ರವಚನ ಆಲಿಕೆಯಿಂದ ಮನುಷ್ಯ ಜೀವನದಲ್ಲಿ ಬದಲಾವಣೆ ಬರುತ್ತದೆ. ಸಾರ್ಥಕ ಜೀವನಕ್ಕೆ ದೈವ ಸನ್ನಿಧಿಗಳು ಮಾರ್ಗದರ್ಶಿಯಾಗಿವೆ ಎಂದು ಅಫಜಲಪುರದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿದರು.
ನೀಲೂರು ಗ್ರಾಮದ ಶಿವಶರಣೆ ನಿಂಬೆಕ್ಕ ದೇವಿ ಜಾತ್ರೆ ನಿಮಿತ್ತ ಬುಧವಾರ ರಾತ್ರಿ ಹಮ್ಮಿಕೊಂಡ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಪುರಾಣದಲ್ಲಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನೀಲೂರು ನಿಂಬೆಕ್ಕ ದೇವಿ ದೇವಸ್ಥಾನ ಅಭಿವೃದ್ಧಿಗೆ ೨೫೦೦೦ ರೂ. ದೇಣಿಗೆಯನ್ನು ಮಳೇಂದ್ರ ಸಂಸ್ಥಾನ ಹಿರೇಮಠದಿಂದ ನೀಡುವುದಾಗಿ ಘೋಷಿಸಿದರು.
ಶ್ರೀನಿವಾಸ ಸರಡಗಿಯ ಶ್ರೀ ಡಾ.ಅಪ್ಪಾರಾವ ದೇವಿ ಮುತ್ಯಾ ಆಶೀರ್ವಚನ ನೀಡಿ, ದೇವಸ್ಥಾನಕ್ಕೆ ೨೫ ಸಾವಿರ ರೂ. ದೇಣಿಗೆ ಘೋಷಿಸಿದರು.
ಪ್ರಮುಖರಾದ ಶರಣಯ್ಯ ಸ್ವಾಮಿ ಹಿರೇಮಠ, ಶಿವಶರಣಪ್ಪ ಸೀರಿ, ಬಿ.ಎಸ್.ಪಾಟೀಲ್ ಹಡಲಗಿ, ಮಾದೇವಪ್ಪ ಪಗಡೆ, ಮಲ್ಲಿನಾಥ ಚಟ್ಟರಕಿ, ರವಿಕುಮಾರ ನೀಲೂರ, ಶರಣು ನೇತಿ, ಡಾ.ಮಾಂತಪ್ಪ ಹಾಳಮಳ್ಳಿ, ಭಗವಂತರಾವ ಕಾಮಜಿ, ಮಲ್ಲಿನಾಥ ಅಷ್ಟಗಿ, ಸಾಯಬಣ್ಣ ಹೂಗಾರ, ಬಾಬುರಾವ ಕುಲಕರ್ಣಿ, ಸಿದ್ದರಾಮ ಮುಗದಿ, ಸಂಗಮನಾಥ ಅಷ್ಟಗಿ, ಶ್ರೀಮಂತ ಗಣಮುಖಿ, ಶರಣು ಹಾಳಮಳ್ಳಿ ಇತರರಿದ್ದರು. ಶರಣಕುಮಾರ ಶಾಸ್ತಿç ಪುರಾಣ ನಡೆಸಿಕೊಟ್ಟರು.
ಭವ್ಯ ರಥೋತ್ಸವ ನಾಳೆ: ಅಫಜಲಪುರ ತಾಲೂಕಿನ ನೀಲೂರು ನಿಂಬೆಕ್ಕ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಏ.೧೩ರಂದು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದಿಕೋಲು, ಪಲ್ಲಕ್ಕಿ, ಪುರವಂತರು, ವಾದ್ಯ ವೈಭವದೊಂದಿಗೆ ಗ್ರಾಮದ ಹೊರವಲಯದಲ್ಲಿನ ನಿಂಬೆಕ್ಕ ದೇವಸ್ಥಾನಕ್ಕೆ ತಲುಪಿದ ನಂತರ ಸಂಜೆ ೬ಕ್ಕೆ ರಥೋತ್ಸವ ನೆರವೇರಲಿದೆ. ೧೪ರಂದು ಸಂಜೆ ೪ಕ್ಕೆ ಜಂಗಿ ಪೈಲ್ವಾನರಿಂದ ಜಂಗೀ ಕುಸ್ತಿ ನಡೆಯಲಿವೆ. ಸಂಜೆ ೬ಕ್ಕೆ ಪಲ್ಲಕ್ಕಿ ಉತ್ಸವ ಗ್ರಾಮಕ್ಕೆ ತೆರಳಲಿದೆ ಎಂದು ದೇವಸ್ಥಾನ ಸಮಿತಿಯ ಸಾಯಿಬಣ್ಣ ಹೂಗಾರ ತಿಳಿಸಿದ್ದಾರೆ.