ಜೀತ ಪದ್ದತಿ ನಿಷೇಧವಾದರು ಬದಲಾಗದ ಪರಿಸ್ಥಿತಿ

bkt-12-9
ಬಾಗಲಕೋಟೆ ಜಿ.ಪಂ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಽಕಾರ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ದತಿ (ರದ್ದತಿ) ನಿಷೇಧ ಕಾರ್ಯಗಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಉದ್ಘಾಟಿಸಿದರು.
Published on

ಬಾಗಲಕೋಟೆ: ಜೀತ ಪದ್ದತಿ (ರದ್ದತಿ) ನಿಷೇಧ ಕಾಯ್ದೆ ಜಾರಿಯಾಗಿ ೪೯ ವರ್ಷ ಕಳೆದರು ಪರಿಸ್ಥಿತಿ ಬದಲಾಗಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಹೇಳಿದರು.

ಜೀತ ಪದ್ದತಿ ನಿರ್ಮೂಲನಾ ದಿನದ ಅಂಗವಾಗಿ ನಗರದ ಜಿ.ಪಂ ನೂತನ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾನೂನು ಸೇವೆಗಳ ಪ್ರಾಽಕಾರ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜೀತ ಪದ್ದತಿ (ರದ್ದತಿ) ನಿಷೇಧ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜೀತ ಪದ್ದತಿ ನಿಷೇಧ ಕಾಯ್ದೆ ೧೯೭೬ ರಲ್ಲಿಯೇ ಜಾರಿಗೊಳಿಸಲಾಗಿದೆ. ಕಾಯ್ದೆ ಅನ್ವಯ ಹಲವು ಕ್ರಮ, ನಿಯಮ ತೆಗೆದುಕೊಳ್ಳಲಾಗಿದೆ. ಆದರು ಸಹ ಜೀತ ಪದ್ಧತಿ ಪೂರ್ಣ ಪ್ರಮಾಣದಲ್ಲಿ ನಿಲ್ಲುತ್ತಿಲ್ಲ ಕಳವಳ ವ್ಯಕ್ತಪಡಿಸಿದರು.

ನಿಷೇಧ ಕಾಯ್ದೆ ಕುರಿತು ಕಾರ್ಯಗಾರ ಅರಿವು ಮೂಡಿಸುವ ಕಾರ್ಯವಾಗುತ್ತಿದೆ ಎಂದರೆ ಪರಿಣಾಮಕಾರಿಯಾಗಿ ಜೀತ ಪದ್ದತಿ ಹೋಗಲಾಡಿಸಲು ಸಾಧ್ಯವಾಗಿಲ್ಲ ಎಂದರ್ಥ. ಜಿಲ್ಲೆಯ ಅನೇಕ ಕಾರ್ಮಿಕರು ವಲಸೆ ಕಾರ್ಮಿಕರಾಗಿ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಗೆ ಹೋಗಿ ಅಲ್ಲಿಯೇ ಬಂಽತ ಕಾರ್ಮಿಕರಾಗಿರುವುದು ಅಂಕಿ ಅಂಶಗಳು ಹೇಳುತ್ತಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ. ಇಂದು ಆಯೋಜಿಸಿರುವ ಕಾರ್ಯಗಾರ ಕಾರ್ಮಿಕ ವರ್ಗದವರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾಽಕಾರಿ ಜಾನಕಿ ಕೆ.ಎಂ. ಮಾತನಾಡಿ, ಜೀತ ಪದ್ಧತಿ ಅಮಾನುಷವಾಗಿದೆ, ಅಮಾನವೀಯ ಕಳಂಕ ಪದ್ದತಿಯಾಗಿದೆ. ಅರ್ಧ ಶತಕಗಳ ವರ್ಷವಾದರೂ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸಾಧ್ಯಾಗಿಲ್ಲ ಎನ್ನುವುದು ನೋವಿನ ಸಂಗತಿ. ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳುವಂತಹ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಗಂಭೀರ ವಿಷಯವಾಗಿದೆ. ಅಕ್ಷರಸ್ಥರಾಗಿ, ಅಽಕಾರಿಗಳಾದ್ದರೂ ಕೂಡ ಕೆಲವೊಂದು ಹೊಟೇಲಗಳು ಮತ್ತು ಸ್ಥಳಗಳಲ್ಲಿ ಬಾಲ ಕಾರ್ಮಿಕರು ಹಾಗೂ ಬಂಽತ ಕಾರ್ಮಿಕರು ಅಂತ ಕಂಡು ಬರುತ್ತಿದ್ದಾರೆ. ನೋಡಿಯೂ ನೋಡದಂತೆ ಬಂದಾಗ ನಾವೂ ಕೂಡ ಭಾಗಿದಾರರಾತ್ತಿದ್ದೇವೆ. ಎಲ್ಲರೂ ದೃಢ ನಿರ್ಧಾರ ಮೂಲಕ ಜೀತ ಪದ್ದತಿ ನಿರ್ಮೂಲನೆಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ಹೈಕೋರ್ಟ ವಕೀಲ ಕ್ರಿಸ್ಠೋಫರ್ ಸೇನ್ವಿ ಮಾತನಾಡಿ, ಜೀತ ಕಾರ್ಮಿಕ ಪದ್ಧತಿ ಹಾಗೂ ಮಾನವ ಕಳ್ಳ ಸಾಗಾಣಿಕೆ ಕುರಿತು ವಿವರಿಸುತ್ತಾ ಮಾನವ ಕಳ್ಳಸಾಗಾಣಿಕೆ ಮತ್ತು ಜೀತ ಕಾರ್ಮಿಕ ಪದ್ದತಿ ಒಂದು ಅಪರಾಧವಾಗಿದೆ. ಜೀತ ಪದ್ದತಿ ನಿರ್ಮೂಲನೆ ಸಮಾಜದ ಕೈಯಲ್ಲಿದೆ. ಇದನ್ನು ಸಾಕಾರಗೊಳಿಸುವ ಜವಾಬ್ದಾರಿ ಎಲ್ಲಾ ಹಂತದ ಅಽಕಾರಿಗಳ ಮೇಲಿದೆ. ಜೀತ ಮುಕ್ತರಿಗೆ ಪುನರ್ವಸತಿಯನ್ನು ಸರಿಯಾದ ಸಮಯದಲ್ಲಿ ನೀಡಿದಲ್ಲಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸಾಧ್ಯ. ಕಾರ್ಮಿಕ ನೀತಿಗಳನ್ನು ಅಽಕಾರಿಗಳು ಸಮರ್ಪಕವಾಗಿ ಅನುಷ್ಠಾನ ಮಾಡಿದಲ್ಲಿ ಜೀತ ಪ್ರಕರಣಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರು ಎಜಿಎಂ ಸಂಸ್ಥೆಯ ಮುಖ್ಯಸ್ಥ ಏಸು ಫಾದಂ ಅವರು ಜೀತ ಕಾರ್ಮಿಕರ ಪುನರ್ವಸತಿ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ, ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಪ್ರಸನ್ನ ದೇಸಾಯಿ, ಅಪರ ಜಿಲ್ಲಾಽಕಾರಿ ಅಶೋಕ ತೇಲಿ, ಜಿಲ್ಲಾ ಕಾರ್ಮಿಕ ಕಲ್ಯಾಣ ಅಽಕಾರಿ ರಮೇಶ ಸುಂಬಡ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net