ಜಿಲ್ಲೆಯಲ್ಲಿ ಮತ್ತೆ ಚುರುಕುಗೊಂಡ ಮಳೆ

9hnr1
Published on

ಕಾರವಾರ: ಜಿಲ್ಲೆಯಲ್ಲಿ ಮಳೆ ಮತ್ತೆ ಚುರುಕುಗೊಂಡಿದೆ. ಇದರಿಂದ ಹೊನ್ನಾವರದಲ್ಲಿ ಇಳಿದಿದ್ದ ನೆರೆ ಮತ್ತೆ ಆವರಿಸಿಕೊಂಡಿದೆ.

ಭಾನುವಾರ ಬೆಳಗಿನ ವರದಿಯಂತೆ ಹೊನ್ನಾವರದಲ್ಲಿ 137 ಮಿಮೀ ಮಳೆಯಾಗಿದೆ. ಹೊನ್ನಾವರ ಗುಂಡಬಾಳ ಹೊಳೆ ತುಂಬಿ ಗುಂಡಿಬೈಲು, ಚಿಕ್ಕನಕೋಡು ಭಾಗದಲ್ಲಿ ನೆರೆ ಪರಿಸ್ಥಿತಿ ನಿರ್ವಣವಾಗಿದೆ. ಒಂದು ದಿನದ ಹಿಂದಷ್ಟೇ ಮನೆಗೆ ತೆರಳಿದ್ದ ಜನ ಮತ್ತೆ ಕಾಳಜಿ ಕೇಂದ್ರಕ್ಕೆ ಮರಳಿದ್ದಾರೆ. ಗುಂಡಿಬೈಲ್​ನ ಎರಡು ಕಾಳಜಿ ಕೇಂದ್ರದಲ್ಲಿ ಒಟ್ಟು 93 ಜನರಿದ್ದು, ಚಿಕ್ಕನಕೋಡಿನಲ್ಲಿ ಒಟ್ಟ 49 ಜನರು ಆಶ್ರಯ ಪಡೆದಿದ್ದಾರೆ. ಅಳ್ಳಂಕಿ ಬೆಳಗಾರಮಕ್ಕಿಯ ಸಂತೋಷ ಕಾಮಯ್ಯ ನಾಯ್ಕ ಅವರ ಮನೆಗೆ ಹಾನಿಯಾಗಿದೆ.

ನಾಥಗೇರಿಯಲ್ಲಿ ಗುಡ್ಡ ಕುಸಿತ: ಹೊನ್ನಾವರ ತಾಲೂಕಿನ ಕೆಲವು ಭಾಗಗಳಲ್ಲಿ ಗುಡ್ಡಕುಸಿತ, ಮರಗಳು ಉರುಳಿ ಬಿದ್ದು ಹಾನಿ ಸಂಭವಿಸಿದೆ. ಖರ್ವಾ ಗ್ರಾಮದ ನಾಥಗೇರಿಯಲ್ಲಿ ಶ್ರೀದೇವಿ ನಾಯ್ಕ ಎನ್ನುವವರ ಮನೆಯ ಹಿಂಬದಿ ಗುಡ್ಡಕುಸಿತವಾಗಿದೆ. ಬಂಡೆಗಲ್ಲುಗಳು, ಮಣ್ಣಿನರಾಶಿ ಬಿದ್ದು ಅಡಿಕೆ, ತೆಂಗು ಮರಗಳು ನೆಲಕ್ಕುರುಳಿದೆ. ಗುಡ್ಡದಿಂದ ಹರಿದು ಬರುವ ನೀರಿನ ಕಾಲುವೆಯು ಮುಚ್ಚಿದೆ.

3 ಗೇಟ್ ಬಂದ್: ಕಾರವಾರದ ಕದ್ರಾ ಅಣೆಕಟ್ಟೆಯಿಂದ ನೀರು ಹೊರಬಿಡುವ ಪ್ರಮಾಣವನ್ನು ತಗ್ಗಿಸಲಾಗಿದೆ. ಕಳೆದ 5 ದಿನಗಳಿಂದ 6 ಗೇಟ್​ಗಳು ತೆರೆದಿದ್ದವು. ಭಾನುವಾರ ಮೂರು ಗೇಟ್​ಗಳನ್ನು ಮುಚ್ಚಲಾಗಿದ್ದು, ಉಳಿದ ಮೂರು ಗೇಟ್​ಗಳಿಂದ ನೀರು ಹೊರಬಿಡಲಾಗುತ್ತಿದೆ. ಕದ್ರಾ ಅಣೆಕಟ್ಟೆಯ ನೀರಿನ ಪ್ರಮಾಣ 30.30 ಕ್ಕೆ ಇಳಿದಿದ್ದು, ಒಳಹರಿವು 28229 ಕ್ಯೂಸೆಕ್​ಇದೆ. 28785 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ಕೊಡಸಳ್ಳಿ ಅಣೆಕಟ್ಟೆಯ ಎಲ್ಲ ಗೇಟ್​ಗಳನ್ನು ಬಂದ್ ಮಾಡಲಾಗಿದೆ. ಸೂಪಾಕ್ಕೆ 30553 ಕ್ಯೂಸೆಕ್ ನೀರು ಹರಿದು ಬರುತ್ತಿದೆ.

17 ಮನೆಗಳಿಗೆ ಹಾನಿ: ಕಾರವಾರ: ಅತಿವೃಷ್ಟಿಯಿಂದ ಕುಮಟಾದ 4, ಯಲ್ಲಾಪುರ ಹಾಗೂ ಹೊನ್ನಾವರದ ತಲಾ 1, ಭಟ್ಕಳ ಹಾಗೂ ಶಿರಸಿಯ ತಲಾ 3, ಮುಂಡಗೋಡಿನ 3 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹೊನ್ನಾವರ ಹಾಗೂ ಅಂಕೋಲಾದ 1 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net