ಜಿಲ್ಲೆಯಲ್ಲಿ ಚುರುಕುಗೊಂಡ ಮಳೆ

4KWR4
Published on

ಕಾರವಾರ: ತಾಲೂಕಿನಲ್ಲಿ ಇಡೀ ದಿನ ಎಡಬಿಡದೇ ಮಳೆ ಸುರಿದಿದೆ. ಇದರಿಂದ ಹಲವೆಡೆ ನೀರು ತುಂಬಿದೆ. ಅರಬ್ಬಿ ಸಮುದ್ರ ಅಬ್ಬರಿಸುತ್ತಿದ್ದು, ಆಳೆತ್ತರದ ಅಲೆಗಳು ಏಳುತ್ತಿವೆ. ವಿವಿಧೆಡೆ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಸಿದ್ದಾಪುರದಲ್ಲಿ ಬಿರುಸಾದ ಗಾಳಿಯ ಜತೆಗೆ ದಿನವಿಡೀ ಮಳೆಯಾಗಿದೆ. ಶಿರಸಿ, ಯಲ್ಲಾಪುರ ಪಟ್ಟಣದಲ್ಲೂ ಉತ್ತಮ ಮಳೆಯಾಗಿದೆ. ಶನಿವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 55, ಭಟ್ಕಳದಲ್ಲಿ 58, ಹಳಿಯಾಳದಲ್ಲಿ 4.2, ಹೊನ್ನಾವರದಲ್ಲಿ 79.7, ಕಾರವಾರದಲ್ಲಿ 119.2, ಕುಮಟಾದಲ್ಲಿ 74.2, ಮುಂಡಗೋಡಿನಲ್ಲಿ 18.4, ಸಿದ್ದಾಪುರದಲ್ಲಿ 19.4, ಶಿರಸಿಯಲ್ಲಿ 22, ಜೊಯಿಡಾದಲ್ಲಿ 27, ಯಲ್ಲಾಪುರದಲ್ಲಿ 37.2 ಮಿ.ಮೀ. ಮಳೆಯಾಗಿದೆ. ಜುಲೈ 5ರಂದು ಜಿಲ್ಲೆಯಲ್ಲಿ ಸರಾಸರಿ 115 ಮಿ.ಮೀ.ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net