

ವಿಜಯವಾಣಿ ಸುದ್ದಿಜಾಲ ಕಾರವಾರ
ಜಿಲ್ಲೆಯ 20 ಪೀಠಗಳಲ್ಲಿ ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ 24,095 ಪ್ರಕರಣಗಳನ್ನು ಸಂಧಾನದೊಂದಿಗೆ ಇತ್ಯರ್ಥ ಮಾಡಲಾಗಿದೆ.
20,845 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 3,250 ಪ್ರಕರಣಗಳು ಮುಕ್ತಾಯವಾಗಿದ್ದು, ಒಟ್ಟು 33.25 ಕೋಟಿ ರೂ. ಹಣ ಸಂಗ್ರಹ ಹಾಗೂ ಪಾವತಿಯಾಗಿದೆ. ಮುಖ್ಯವಾಗಿ 17,971 ವ್ಯಾಜ್ಯಪೂರ್ವ ಹಾಗೂ 2322 ವ್ಯಾಜ್ಯ ನಂತರ ಸೇರಿ ಒಟ್ಟು 20,293 ಸಣ್ಣಪುಟ್ಟ ಕ್ರಿಮಿನಲ್ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಕಾರ್ಮಿಕರ ವಿವಾದಗಳಿಗೆ ಸಂಬಂಧಿಸಿದ 2,559 ಪ್ರಕರಣಗಳನ್ನು ಸಂಧಾನ ಮಾಡಲಾಗಿದ್ದು, ಒಟ್ಟು 5.24 ಕೋಟಿ ರೂ. ಹಣ ಪಾವತಿ ಮಾಡಲಾಗಿದೆ.
135-ಬ್ಯಾಂಕ್ ಪ್ರಕರಣಗಳು, 60-ರಾಜಿಯಾಗಬಲ್ಲ ಅಪರಾಽಕ ಪ್ರಕರಣಗಳು, 12-ವಿದ್ಯುತ್ ಶುಲ್ಕಕ್ಕೆ ಸಂಬಂಧಸಿದ ಪ್ರಕರಣಗಳು, 42-ಮೋಟಾರು ವಾಹನ ಅಪಘಾತ ಪ್ರಕರಣಗಳು, 405-ಚೆಕ್ ಅಮಾನ್ಯ, 4-ವೈವಾಹಿಕ, 161-ನೀರಿನ ಶುಲ್ಕಕ್ಕೆ ಸಂಬಂಧಿಸಿದ ಪ್ರಕರಣಗಳು 3-ಗ್ರಾಹಕರ ರಕ್ಷಣಾ ವೇದಿಕೆಯ ಪ್ರಕರಣಗಳು ರಾಜಿಯಾಗಿವೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್ ತಿಳಿಸಿದ್ದಾರೆ.