ಜಿಲ್ಲೆಯಲ್ಲಿ 157 ಜನರಿಗೆ ಸೋಂಕು ದೃಢ

carona logo
Published on

ಹಾವೇರಿ: ತಾಲೂಕು ಆರೋಗ್ಯಾಧಿಕಾರಿ, ಖಾಸಗಿ ವೈದ್ಯ, ಪೊಲೀಸ್, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ತಾಪಂ, ಆರೋಗ್ಯ, ಶಿಕ್ಷಣ, ರೈಲ್ವೆ ಇಲಾಖೆ, ಬ್ಯಾಂಕ್ ಉದ್ಯೋಗಿ ಸೇರಿ ಜಿಲ್ಲೆಯಲ್ಲಿ ಮಂಗಳವಾರ 157 ಜನರಿಗೆ ಕರೊನಾ ದೃಢಪಟ್ಟಿದೆ. 111 ಮಂದಿ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 4,481 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. 3,092 ಜನರು ಸೋಂಕಿನಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ. 112 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ. 1,277 ಸಕ್ರಿಯ ಪ್ರಕರಣಗಳಿದ್ದು, 890 ಸೋಂಕಿತರು ಹೋಂ ಐಸೋಲೇಷನ್​ನಲ್ಲಿ ಹಾಗೂ 387 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ತಾಲೂಕುವಾರು ವಿವರ: ರಾಣೆಬೆನ್ನೂರ ತಾಲೂಕು 53, ಹಿರೇಕೆರೂರ 30, ಹಾವೇರಿ 20, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕಿನಲ್ಲಿ ತಲಾ 18, ಶಿಗ್ಗಾಂವಿ 10, ಸವಣೂರ ತಾಲೂಕಿನಲ್ಲಿ 6, ದಾವಣಗೆರೆ ಜಿಲ್ಲೆಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ.

ಹಾವೇರಿ ತಾಲೂಕಿನ 67, ರಾಣೆಬೆನ್ನೂರ ಹಾಗೂ ಬ್ಯಾಡಗಿ ತಾಲೂಕಿನ ತಲಾ 17, ಶಿಗ್ಗಾಂವಿ ತಾಲೂಕಿನ 5, ಹಾನಗಲ್ಲ ತಾಲೂಕಿನ 4, ಸವಣೂರ ತಾಲೂಕಿನ ಒಬ್ಬರು ಕೋವಿಡ್​ನಿಂದ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ. ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.

ರಾಣೆಬೆನ್ನೂರ ವಿದ್ಯಾನಗರದ 85 ವರ್ಷದ ವೃದ್ಧ, ಹಾವೇರಿ ಶಿವಾಜಿ ನಗರದ 53 ವರ್ಷದ ಪುರುಷ, ಕರ್ಜಗಿ ಗ್ರಾಮದ 65 ವರ್ಷದ ವೃದ್ಧೆ ಸೇರಿ ಮೂವರ ಮರಣವನ್ನು ಮಂಗಳವಾರ ದೃಢೀಕರಿಸಲಾಗಿದೆ. ಕೋವಿಡ್ ನಿಯಮಾನುಸಾರ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣನವರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net