ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವೆ

bkt-24-4
Published on

ಬಾಗಲಕೋಟೆ: ಸಂಕಷ್ಟಗಳಿಗೆ ಸ್ಪಂದಿಸುವ ಮೂಲಕ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸುವುದಾಗಿ ನೂತನ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಲ್ಲಾ ಪಂಚಾಯತ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಹಯೋಗದಲ್ಲಿ ಹಮ್ಮಿಕೊಂಡ ನೂತನ ಜಿಲ್ಲಾಧಿಕಾರಿಗಳಿಗೆ ಸ್ವಾಗತ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಬಳಿಕ ಮಾತನಾಡಿದ ಅವರು ಜಿಲ್ಲೆಯನ್ನು ಅಬಿವೃದ್ದಿಯತ್ತ ಕೊಂಡೊಯ್ಯಬೇಕಾದರೆ ಕೇವಲ ಜಿಲ್ಲಾಧಿಕಾರಿಗಳ ಜವಾಬ್ದಾರಿಯಲ್ಲಿ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಜವಾಬ್ದಾರಿಯು ಆಗಿದೆ. ಭಿವೃದ್ದಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಸರಕಾರ ಮತ್ತು ಸಮಾಜದ ಋಣ ಎಲ್ಲರ ಮೇಲೆ ಇದೆ. ಎಷ್ಟು ಸಾಧ್ಯನೋ ಅಷ್ಟು ಕೆಲಸ ಮಾಡಬೇಕು. ಕಚೇರಿಗೆ ಬರುವ ಪ್ರತಿಯೊಬ್ಬರನ್ನು ಸೌಜನ್ಯದಿಂದ ವರ್ತಿಸಿ ಅವರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸವಾಗಬೇಕು. ಸರಕಾರ ನಮಗೆ ಅಧಿಕಾರ ಕೊಟ್ಟಿರುವುದು ಸಾರ್ವಜನಿಕರ ಕೆಲಸಕ್ಕಾಗಿ ಎಂಬುದನ್ನು ಮರೆಯಬಾರದು. ನಮ್ಮಿಂದ ಅವರು ಅಲ್ಲ, ಅವರಿಂದ ನಾವು ಎಂಬುದನ್ನು ತಿಳಿದು ವಾಸ್ತವ ಮನದಟ್ಟು ಮಾಡಿಕೊಂಡು ದಿನಂಪ್ರತಿ ವೃತ್ತಿಯಲ್ಲಿ ಅಪ್‍ಡೆಟ್ ಆಗಬೇಕು. ಅಂದಾಗ ಮಾತ್ರ ಅಭಿವೃದ್ದಿ ಆಗಲು ಸಾದ್ಯವಾಗುತ್ತದೆ ಎಂದರು.

ನಾವು ಎಸ್‍ಡಿಎ, ಎಫ್‍ಡಿಎಯಾಗಿ ಕೆಲಸ ಮಾಡುತ್ತರುವಾಗ ಸರಕಾರದ ಯಾವುದೇ ಒಂದು ಅಧಿಸೂಚನೆಯ ಪ್ರತಿ ನೋಡಬೇಕೆಂದರೆ ಸಾಧ್ಯವಾಗುತ್ತಿರಲಿಲ್ಲ. ಈಗ ಆ ಪರಿಸ್ಥಿತಿ ಇಲ್ಲ. ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಕೆಲಸದಲ್ಲಿ ಕ್ಲಾರಿಟಿ ಇರಬೇಕು. ಕ್ಲಾರಿಟಿ ಸಿಗುವವರೆಗೂ ಕೆಲಸ ಮಾಡಬಾರದು. ಪರಿಹಾರ ಕಂಡುಕೊಂಡು ಮುಂದುವರೆಯಬೇಕು. ಅಂದಾಗ ಕೆಲಸದಲ್ಲಿ ಗುಣಮಟ್ಟ ತರಲು ಸಾದ್ಯ. ನಮ್ಮಲ್ಲಿರುವ ಶಕ್ತಿಯನ್ನು ಬಳಸಿಕೊಂಡು ಉತ್ತಮ ಕೆಲಸ ಮಾಡಿದಾಗ ನಮಗೆ ತೃಪ್ತಿ ಸಿಗುತ್ತದೆ. ಆವಾಗ ನಾವು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ ಎಂದರು.

ಪ್ರಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಎಲ್ಲರನ್ನು ಸ್ವಾಗತಿಸಿ ನೂತನ ಜಿಲ್ಲಾಧಿಕಾರಿಗಳ ಪರಿಚಯ ಮಾಡಿಕೊಟ್ಟರು. ವಿವಿಧ ಇಲಾಖೆಯ ಅಧಿಕಾರಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಉಪ ವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸೇರಿದಂತೆ ಜಿ.ಪಂ ಯೋಜನಾ ನಿರ್ದೇಶಕ ಸಿ.ಆರ್.ಮುಂಡರಗಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net