ಜಿಲ್ಲೆಗೆ ಶ್ರೀಮಂತ ಇತಿಹಾಸವಿದೆ

bkt-22-2
ಸಾಹಿತಿ ಡಾ.ಬಸವರಾಜ ಖೋತ ಮಾತನಾಡಿದರು.
Published on

ಬಾಗಲಕೋಟೆ: ಅಖಂಡ ವಿಜಯಪುರ ಜಿಲ್ಲೆಯಿಂದ ಬೇರ್ಪಟ್ಟ ಬಾಗಲಕೋಟೆ ಜಿಲ್ಲೆಯು ತನ್ನಯಾದ ಶ್ರೀಮಂತವಾದ ಇತಿಹಾಸವನ್ನು ಉಳಿಸಿ-ಬೆಳೆಸಿಕೊಂಡು ಬಂದಿದೆ ಎಂದು ಸಾಹಿತಿ ಡಾ. ಬಸವರಾಜ ಖೋತ ಅಭಿಪ್ರಾಯ ಪಟ್ಟರು.

ಬಾದಾಮಿ ತಾಲೂಕಿನ ನೀರಬೂದಿಹಾಳದಲ್ಲಿ ಶನಿವಾರ ಬಾಗಲಕೋಟೆ ಜಿಲ್ಲಾ ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಜಿಲ್ಲಾ ಗೋಷ್ಠಿ-೧ರ ಜಿಲ್ಲಾ ದರ್ಶನದಲ್ಲಿ ಅವರು ಬಾಗಲಕೋಟೆ ಜಿಲ್ಲೆಯ ಇತಿಹಾಸ ಎಂಬ ವಿಷಯ ಮಂಡನೆ ಮಾಡಿದರು.

ಐತಿಹಾಸಿಕ, ಸಾಮಾಜಿಕ, ಶೈಕ್ಷಣಿಕ, ನೀರಾವರಿ, ಕೃಷಿ, ವಿಜ್ಞಾನ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆ ಮಾಡುತ್ತಾ ನಾಡಿನಲ್ಲಿ ತನ್ನದೆಯಾದ ಹೆಸರು ಗಳಿಸಿರುವ ಬಾಗಲಕೋಟೆ ಜಿಲ್ಲೆಯ ಶ್ರೀಮಂತಿಕೆ ಹೊಂದಿರುವ ಜಿಲ್ಲೆಯಾಗಿದೆ ಎಂದರು.

ಮೋಡಿಲಿಪಿ ತಜ್ಞ ಡಾ. ಸಂಗಮೇಶ ಕಲ್ಯಾಣಿ ಅವರು ಜಿಲ್ಲೆಯ ಅಭಿವೃದ್ಧಿಯ ಹೊಸ ಸಾಧ್ಯತೆಗಳು ಎಂಬ ವಿಷಯ ಮಂಡಿಸಿದರು. ಜಮಖಂಡಿಯ ಸಾಹಿತಿ ಡಾ.ಬಸವರಾಜ ಕಡ್ಡಿ ಅವರು ಸಾರಥ್ಯ ವಹಿಸಿದ್ದರು. ಬಾಗಲಕೋಟೆ ಸಾಹಿತಿ ಡಾ.ಸಹಜಾನಂದ ಕೆಂಗಲಗುತ್ತಿ ಅವರು ಆಶಯ ನುಡಿ ಹೇಳಿದರು. ನಿವೃತ್ತ ಪ್ರಾಚಾರ್ಯ ಡಾ.ಬಿ.ಎಂ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಸಾಪ ಹುನಗುಂದ ತಾಲೂಕಾ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net