ಜಿಲ್ಲಾಧಿಕಾರಿಗೆ ನಗರಸಭೆ ಸದಸ್ಯೆ ದೂರು

Published on

ಕೊಳ್ಳೇಗಾಲ: ನಗರಸಭೆಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ನಗರಸಭೆ ಕಂದಾಯ ಪ್ರಭಾರ ನಿರೀಕ್ಷಕ ಆರ್.ರಾಘವೇಂದ್ರ ಇಚ್ಛಾನುಸಾರವಾಗಿ ಬಿ-ಖಾತೆ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯೆ ಜಯಮರಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರಿಗೆ ಸೋಮವಾರ ದೂರು ನೀಡಿದ್ದಾರೆ.

2025 ಫೆ.12ರಂದು ಅಧಿಕೃತವಾಗಿ ಪ್ರಕಟವಾಗಿರುವ ಕರ್ನಾಟಕ ರಾಜ್ಯ ಪತ್ರದಂತೆ ಬಿ-ಖಾತೆಯನ್ನು ಕೊಡಲು ಸರ್ಕಾರ ಮಾಡಿರುವ ಮಾನದಂಡದ ಬಗ್ಗೆ ಇಂದಿನವರೆಗೂ ಕೊಳ್ಳೇಗಾಲ ನಗರಸಭೆಯ ಪೌರಾಯುಕ್ತರಾಗಲಿ, ಪ್ರಭಾರ ಕಂದಾಯ ನಿರೀಕ್ಷಕ ಆರ್.ರಾಘವೇಂದ್ರ ಆಗಲಿ ಸ್ಪಷ್ಟನೆ ಇಲ್ಲದೆ ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ನಗರಸಭೆಯ ಈ ಅಧಿಕಾರಿಗಳು ಸಾರ್ವಜನಿಕರಿಗೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಅಲ್ಲದೆ ರಾಘವೇಂದ್ರ ಅವರು ಸಾರ್ವಜನಿಕರ ಕೆಲಸವನ್ನು ಉದ್ದೇಶ ಪೂರ್ವಕವಾಗಿ ವಿಳಂಬ ಮಾಡುತ್ತಿದ್ದು, ಅವರನ್ನು ಬೇರೆ ಊರಿಗೆ ನಿಯೋಜನೆ ಮಾಡುವಂತೆ ನಗರಸಭೆ ಸದಸ್ಯೆ ಜಯಮರಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net