ಜಿಪಂನಲ್ಲಿ ಕಮಲ ಅರಳಿಸುವ ಗುರಿ

7KWR3
Published on

ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಹೆಚ್ಚಿನ ತಾಲೂಕು ಪಂಚಾಯಿತಿಗಳನ್ನು ಬಿಜೆಪಿ ಗೆಲ್ಲುವಂತೆ ಪೂರ್ವ ತಯಾರಿ ನಡೆಸಿ ಎಂದು ಶಾಸಕಿ ರೂಪಾಲಿ ನಾಯ್ಕ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಪಂ, ಜಿಪಂ ಚುನಾವಣೆ ಸಂಬಂಧ ಬಿಜೆಪಿ ಕಾರವಾರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರ ಸ್ಥಳೀಯ ಸಂಸ್ಥೆಗಳು, ಎಂಎಲ್​ಎ, ಎಂಪಿ ಚುನಾವಣೆಯಲ್ಲಿ ಬಿಜೆಪಿ ಸಾಕಷ್ಟು ಸಾಧನೆ ಮಾಡಿದ್ದರೂ ಜಿಪಂನಲ್ಲಿ ಸ್ಥಾನ ಕಡಿಮೆ ಇದೆ. ಗ್ರಾಮೀಣ ಭಾಗದಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಬಲಗೊಳಿಸಿ ಎಲ್ಲ ಜಿಪಂ ಸ್ಥಾನ ಹಾಗೂ ಎಲ್ಲ ತಾಪಂಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವತ್ತ ಪ್ರಯತ್ನಿಸೋಣ ಎಂದರು.

ಕಾರವಾರ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಸ್ವಾಗತಿಸಿದರು. ಗ್ರಾಮೀಣ ಪ್ರಭಾರಿ ಗಜಾನನ ಗುನಗಾ, ಬಿಜೆಪಿ ಎಸ್​ಸಿ ಮೋರ್ಚಾದ ಬಿ.ಎನ್.ಸೂರ್ಯಪ್ರಕಾಶ, ಉದಯ ಬಶೆಟ್ಟಿ, ಮಾಧ್ಯಮ ಸಹ ಸಂಚಾಲಕ ರಾಜೇಶ ನಾಯ್ಕ ಸಿದ್ದರ, ಗ್ರಾಮೀಣ ಪ್ರಧಾನ ಕಾರ್ಯದರ್ಶಿ ದತ್ತಾರಾಮ ಬಾಂದೇಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net