ಜಿಪಂ ಸಿಇಒಗೆ ಬೇಡ ಪಿಯು ಇಲಾಖೆ ಹೊಣೆ

Namoshi
Published on

ಕಲಬುರಗಿ: ಪದವಿಪೂರ್ವ ಶಿಕ್ಷಣ ಇಲಾಖೆ ಕಾರ್ಯನಿರ್ವಹಣೆ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ವಿಭಾಗಕ್ಕೆ ಸಂಬಂಧಿಸಿದ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಿ ಹೊರಡಿಸಿದ ಆದೇಶ ಹಿಂಪಡೆಯುವAತೆ ಒತ್ತಾಯಿಸಿ ವಿಧಾನ ಪರಿಷತ್ ಸದಸ್ಯರ ತಂಡ ಬೆಂಗಳೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿತು.

ವಿದ್ಯಾರ್ಥಿ ಜೀವನದಲ್ಲಿ ಪದವಿಪೂರ್ವ ಶಿಕ್ಷಣ ಪ್ರಮುಖ ಘಟ್ಟವಾಗಿದ್ದು, ಅದರ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಸುರೇಂದ್ರನಾಥ ಸಮಿತಿ ವರದಿ ಆಧರಿಸಿ ಹಿಂದಿನ ಸಿಎಂ ಎಸ್.ಬಂಗಾರಪ್ಪ ಹಾಗೂ ಅಂದಿನ ಶಿಕ್ಷಣ ಸಚಿವ ವೀರಪ್ಪ ಮೋಯ್ಲಿ ಪ್ರತ್ಯೇಕ ಇಲಾಖೆ ಸ್ಥಾಪಿಸಿದ್ದರು.

ಇದು ದೇಶದಲ್ಲಿ ಮಾದರಿಯಾಗಿತ್ತು. ಆದರೀಗ ಇಂತಹ ಮಾದರಿ ಇಲಾಖೆಯನ್ನು ಗೊಂದಲದ ಆದೇಶ ಮೂಲಕ ಮುಚ್ಚುವ ಹುನ್ನಾರ ನಡೆಸಿದ್ದು ಸರಿಯಲ್ಲ. ಪಿಯು ಉಪನ್ಯಾಸಕರು, ಪ್ರಾಂಶುಪಾಲರು, ಶಾಸಕರ ಜತೆ ಸಭೆ ಮಾಡದೆ ದಿಢೀರ್ ಸುತ್ತೋಲೆ ಮೂಲಕ ಇಲಾಖೆಯನ್ನು ಜಿಪಂ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ವಹಿಸಿದ್ದು ತಪ್ಪು. ಈ ಸುತ್ತೋಲೆ ತಕ್ಷಣ ಹಿಂತೆಗೆದುಕೊಳ್ಳಬೇಕು ಎಂದು ತಂಡ ಆಗ್ರಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net