ಜಿಪಂ ಸಿಇಒಗೆ ಕರೊನಾ

carona logo (2)
Published on

ಕಾರವಾರ: ಜಿಲ್ಲೆಯಲ್ಲಿ ಒಟ್ಟಾರೆ ಕರೊನಾ ಸೋಂಕಿತರ ಸಂಖ್ಯೆ 3 ಸಾವಿರ ದಾಟಿದೆ. 2 ಸಾವಿರಕ್ಕೂ ಅಧಿಕ ಜನ ಗುಣ ಹೊಂದಿದ್ದಾರೆ.

ಬುಧವಾರ ಹೊಸದಾಗಿ 99 ಜನರಿಗೆ ಸೋಂಕು ಇರುವುದು ಖಚಿತವಾಗಿದ್ದು, ಜಿಪಂ ಸಿಇಒ ಎಂ.ರೋಶನ್ ಅವರಿಗೂ ಸೋಂಕು ಇರುವುದು ಖಚಿತವಾಗಿದೆ. ಅವರಿಗೆ ರೋಗ ಲಕ್ಷಣ ಕಾಣಿಸಿಕೊಂಡ ದಿನದಿಂದಲೇ ಮನೆಯಲ್ಲೇ ಐಸೋಲೇಶನ್ ಆಗಿದ್ದಾರೆ. ಅವರ ಪತ್ನಿ, ಮಗುವಿನ ಗಂಟಲ ದ್ರವದ ಮಾದರಿ ವರದಿ ಬರುವುದು ಬಾಕಿ ಇದೆ. ತಾವು ಆರೋಗ್ಯವಾಗಿದ್ದು, ತಮ್ಮ ಸಂಪರ್ಕಕ್ಕೆ ಬಂದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಕೋರಿದ್ದಾರೆ.

ಕ್ರಿಮ್ಸ್​ನಲ್ಲಿ ಚಿಕಿತ್ಸೆ ಪಡೆದು ಕರೊನಾ ನೆಗೆಟಿವ್ ಬಂದ ಹೊನ್ನಾವರ ಮೂಲದ 48 ವರ್ಷದ ವ್ಯಕ್ತಿಯೊಬ್ಬರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಜಿಲ್ಲಾಡಳಿತದ ಸೂಚನೆಯಂತೆ ಅವರ ಮೃತ ದೇಹವನ್ನು ಹೊನ್ನಾವರಕ್ಕೆ ಅಂತ್ಯ ಸಂಸ್ಕಾರಕ್ಕಾಗಿ ಕಳಿಸಿಕೊಡಲಾಗಿದೆ.

ತಾಲೂಕುವಾರು ವಿವರ: ಕಾರವಾರದಲ್ಲಿ 14, ಕುಮಟಾ-4, ಭಟ್ಕಳ-15, ಹೊನ್ನಾವರ-20, ಶಿರಸಿ-5, ಸಿದ್ದಾಪುರ- 1, ಮುಂಡಗೋಡ- 6, ಹಳಿಯಾಳ-27, ಜೊಯಿಡಾದಲ್ಲಿ 7 ಜನರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದೆ.

ಕಾರವಾರದಲ್ಲಿ 20, ಮುಂಡಗೋಡಿನಲ್ಲಿ 23, ಹಳಿಯಾಳದ ಹಾಗೂ ದಾಂಡೇಲಿಯಲ್ಲಿ 26 ಜನ ಕರೊನಾದಿಂದ ಗುಣ ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net