ಜಿಪಂ ಸಿಇಒ ಪ್ರಿಯಾಂಗಾ ಟ್ರಾನ್ಸ್‌ಫರ್‌

23KWR-Priyanga M.
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಸಿಇಒ ಪ್ರಿಯಾಂಗಾ ಎಂ. ಅವರು ವರ್ಗಾವಣೆಯಾಗಿದ್ದಾರೆ. ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ಎಂಡಿಯಾಗಿ ನೇಮಕವಾಗಿದ್ದಾರೆ. ಜಿಪಂ ನೂತನ ಸಿಇಒ ಆಗಿ ಈಶ್ವರ ಕುಮಾರ ಖಂಡೂ ನೇಮಕಗೊಂಡಿದ್ದಾರೆ.
ತಮಿಳುನಾಡು ಮೂಲದ 2017 ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದ ಪ್ರಿಯಾಂಗಾ ಅವರು 2019 ರ ಅಕ್ಟೋಬರ್‌ನಲ್ಲಿ ಕಾರವಾರ ಉಪವಿಭಾಗಾಧಿಕಾರಿಯಾಗಿ ನೇಮಕಗೊಂಡಿದ್ದರು. ಇದೇ ಸಂದರ್ಭದಲ್ಲಿ ಅವರು ನಗರಸಭೆ ಪೌರಾಯುಕ್ತರಾಗಿಯೂ ಪ್ರಭಾರ ವಹಿಸಿಕೊಂಡಿದ್ದರು. ಕೋವಿಡ್ ಸಂದರ್ಭದಲ್ಲಿಯೂ ಪೌರಾಯುಕ್ತರಾಗಿ ಅವರು ಕಾರ್ಯನಿರ್ವಹಿಸಿದ್ದರು. 2020 ರ ಡಿಸೆಂಬರ್‌ನಲ್ಲಿ ಅವರು ಜಿಪಂ ಸಿಇಒ ಆಗಿ ಅಽಕಾರ ವಹಿಸಿಕೊಂಡಿದ್ದರು.
2017 ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಈಶ್ವರ ಕುಮಾರ್ ಖಂಡೂ ಅವರು ಈ ಹಿಂದೆ ಮಡಿಕೇರಿ ಎಸಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಬೆಂಗಳೂರಿಗೆ ವರ್ಗಾವಣೆಯಾಗಿ ಆದಾಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net