ಜಿಪಂ ವಿರುದ್ಧ ಪ್ರೆಸ್ ಕ್ಲಬ್ ತಂಡಕ್ಕೆ ಗೆಲುವು

bkt-03-12
ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ನಡೆದ ಸ್ನೇಹ ಪೂರ್ವಕ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಪಡೆದ ಪ್ರೆಸ್ ಕ್ಲಬ್ ತಂಡಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹಾಗೂ ಜಿಎಂ ಸಿಇಒ ಶಶಿಧರ ಕುರೇರ್ ಟ್ರೋಪಿ ವಿತರಿಸಿದರು.
Published on

ಬಾಗಲಕೋಟೆ: ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದಿರುವ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಶುಕ್ರವಾರ ನಡೆದ ಸ್ನೇಹಪೂರ್ವಕ ಕ್ರಿಕೆಟ್ ಪಂದ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಅಧಿಕಾರಿಗಳ ತಂಡದ ವಿರುದ್ಧ ಬಾಗಲಕೋಟೆ ಪ್ರೆಸ್ ತಂಡವೂ ೭ ವಿಕೆಟ್ ಅಂತರದಲ್ಲಿ ಗೆಲುವು ಸಾಽಸಿ, ಟ್ರೋಪಿ ಪಡೆದುಕೊಂಡಿತು.

ಬೆಳಗ್ಗೆ ಟಾಸ್ ಗೆದ್ದ ಆನಂದ ದಲಭಂಜನ ನಾಯಕ್ವದ ತಂಡವೂ ಫಿಲ್ಡಿಂಗ್ ಆಯ್ದುಕೊಂಡಿತು. ಜಿಪಂ ತಂಡದಿಂದ ಆರಂಭಿಕರಾಗಿ ಮೈದಾನಕ್ಕಿಳಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ.ವಿಜಯ ಹಾಗೂ ಜಿಪಂ ಸಿಇಒ ಶಶಿಧರ ಕುರೇರ ಉಪಯುಕ್ತ ಬ್ಯಾಟಿಂಗ್ ನಡೆಸಿದರು. ಬಳಿಕ ಬಾಗಲಕೋಟೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿಯ ಜಿಎಂ ಮಾಧವರಾವ್ ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ ೮ ಓವರ್ ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೪೮ ರನ್ ಪಡೆದರು.

ಪ್ರೆಸ್ ಕ್ಲಬ್ ತಂಡದ ಪರವಾಗಿ ಅಶೋಕ ಶೆಟ್ಟರ ಹಾಗೂ ಜಗದೀಶ್ ಗಾಣಗೇರಿ ತಲಾ ವಿಕೆಟ್ ಪಡೆದರೆ ರವಿ ಹಳ್ಳೂರ ಹಾಗೂ ಅಶೋಕ ಹಡಪದ ತಲಾ ಒಂದು ವಿಕೆಟ್ ಪಡೆದುಕೊಂಡರು.

ಗೆಲುವಿಗೆ ೪೯ ರನ್ ಬೆನ್ನು ಹತ್ತಿ ಮೈದಾನಕ್ಕಿಳಿದ ಪ್ರೆಸ್ ಕ್ಲಬ್ ತಂಡದಿಂದ ಮಂಜುನಾಥ ತಳವಾರ, ರವಿರಾಜ್ ಗಲಗಲಿ, ರವಿ ಹಳ್ಳೂರ ಹಾಗೂ ಕೃಷ್ಣ ಹಾದಿಮನಿ ಅವರ ಉಪಯುಕ್ತ ಬ್ಯಾಟಿಂಗ್ ನಿಂದ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ೫೩ ರನ್ ಗಳಿಸಿ ಗೆಲುವಿನ ದಡ ತಲುಪಿಸಿದರು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಎನ್.ವಿ.ವಿಜಯ, ಜಿಪಂ ಸಿಇಒ ಶಶಿಧರ ಕುರೇರ್, ಆರ್ ಆ್ಯಂಡ್ ಆರ್ ಜಿಎಂ ಮಾಧವರಾವ್ ಹಾಗೂ ಜಿಪಂ ಡಿಎಸ್ ಎನ್.ವೈ.ಬಸರಿಗಿಡದ ಅವರು ಪ್ರೆಸ್ ಕ್ಲಬ್ ತಂಡಕ್ಕೆ ಟ್ರೋಪಿ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net