ಜಿಂಕೆಯನ್ನು ಬೇಟೆಯಾಡಿದ ಇಬ್ಬರ ಬಂಧನ

17KWR9
Published on

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಕಾಂಪೌಂಡ್ ಒಳಗೆ ಜಿಂಕೆ ಕೊಂದು ಮಾಂಸ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಸೋಮವಾರ ಬಂಧಿಸಿದ್ದಾರೆ. ಕದ್ರಾ ಕೆಪಿಸಿ ಕಾಲನಿಯ ಸಂಜುನಾಥ ಮಾರುತಿ ದುಸ್ಕೇಕರ್(26), ದೇಮವಳಮಕ್ಕಿಯ ರಾಜೇಶ ಬಾಬು ನಾಯ್ಕ (38)ಬಂಧಿತರು. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಗೋಪಶಿಟ್ಟಾ ವಲಯದ ಆರ್​ಎಫ್​ಒ ರಾಘವೇಂದ್ರ ನಾಯ್ಕ ನೇತೃತ್ವದಲ್ಲಿ ಕದ್ರಾ ಅರಣ್ಯ ವಲಯದ ಡಿಆರ್​ಎಫ್​ಒಗಳಾದ ಜೈ ಜಗದೀಶ, ಲಕ್ಷ್ಮಣ ಬೀರು, ಅರಣ್ಯ ರಕ್ಷಕ ಇಸ್ಮಾಯಿಲ್ ದಾಳಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net