

ಪಾಂಡವಪುರ: ಪಟ್ಟಣದ ಸುಗ್ಗಿ ಸಿರಿ ತಂಡ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ 2025-26ನೇ ಸಾಲಿನ ಜಿಲ್ಲಾ ಮಟ್ಟದ ಸಮೂಹ ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ತಂಡದ ಎಲ್ಲ ಕಲಾವಿದರು ಹಾಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಯಾದಗಿರಿ ಜಿಲ್ಲೆಯಲ್ಲಿ ನಡೆವ ರಾಜ್ಯಮಟ್ಟದ ಯುವನಜೋತ್ಸಕ್ಕೆ ಆಯ್ಕೆಯಾಗಿದೆ. ಹಿರಿಯ ಖ್ಯಾತ ಕಲಾವಿದರಾದ ಜಿ.ಜಿ.ನವೀನ್ ಗೌಡಗೆರೆ, ಗೊರವಾಲೆ ಚಂದ್ರಶೇಖರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಖ್ಯಾತಿ ತಂದಿರುವ ಕಲಾವಿದರನ್ನು ತಾಲೂಕಿನ ಜಾನಪದ ಕಲಾವಿದರು ಅಭಿನಂದಿಸಿದ್ದಾರೆ.
ಸ್ಪರ್ಧೆಯಲ್ಲಿ ಕಿರಣ್ ಪಾಂಡವಪುರ, ಗೌತಮ್, ಜೀವನ್, ನಿಶಾ, ಪವನ್, ಸಿಂಧು, ಲಿಖಿತ ಗೌಡ, ಧನುಷ್, ಹರ್ಷ ಇತರರು ಭಾಗವಹಿಸಿದ್ದರು.