ಜಾತಿ ಸಮೀಕ್ಷೆ ಜಾರಿಯಾದರೇ ತೀವ್ರ ಹೋರಾಟದ ಎಚ್ಚರಿಕೆ

bkt-16-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಅಖಿಲ ಕರ್ನಾಟಕ ವಿಶ್ವ ಬ್ರಾಹ್ಮಣ ಮಠಾಽಪತಿಗಳು ಹಾಗೂ ಪೀಠಾಽಪತಿಗಳ ಒಕ್ಕೂಟದ ಮಠಾಽÃಶರಾದ ಅರೆಮಾದನಹಳ್ಳಿ ಅನಂತವಿಭೂಸಿತ ಶಿವಜ್ಞಾನತೀರ್ಥ ಮಹಾ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ಮುರನಾಳ ಮಳೇರಾಜೇಂದ್ರ ಮಠದ ಜಗನ್ನಾಥ ಸ್ವಾಮೀಜಿ, ಕಾಳಹಸ್ತೇದ್ರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಹಿಂದುಳಿದ ವರ್ಗಗಳ ಆಯೋಗದಿಂದ ಮಾಡಿರುವ ಜಾತಿ ಸಮೀಕ್ಷೆ ಅವೈಜ್ಞಾನಿಕವಾಗಿದೆ. ವಿಶ್ವ ಕರ್ಮ ಸಮಾಜದ ಜನ ಸಂಖ್ಯೆ ತಪ್ಪಾಗಿ ನಮೂದಿಸಲಾಗಿದೆ. ಇನ್ನೊಂದು ಸಾರಿ ಸಮೀಕ್ಷೆ ಮಾಡಬೇಕು. ಯಥಾವತ್ತಾಗಿ ಜಾರಿ ಮಾಡಲು ಮುಂದಾದರೇ ಉಗ್ರ ಸ್ವರೂಪ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ವಿಶ್ವ ಬ್ರಾಹ್ಮಣ ಮಠಾಽಪತಿಗಳು ಹಾಗೂ ಪೀಠಾಽಪತಿಗಳ ಒಕ್ಕೂಟ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಅರೆಮಾದನಹಳ್ಳಿ ಅನಂತವಿಭೂಸಿತ ಶಿವಜ್ಞಾನತೀರ್ಥ ಮಹಾ ಸ್ವಾಮೀಜಿ, ರಾಮಚಂದ್ರ ಸ್ವಾಮೀಜಿ, ಮುರನಾಳ ಮಳೇರಾಜೇಂದ್ರ ಮಠದ ಜಗನ್ನಾಥ ಸ್ವಾಮೀಜಿ, ಕಾಳಹಸ್ತೇದ್ರ ಸ್ವಾಮೀಜಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಸರಿಯಾಗಿ ಜಾತಿ ಸಮೀಕ್ಷಾ ವರದಿ ನಡೆದಿಲ್ಲ. ಅನೇಕರ ಮನೆಗಳಿಗೆ ಭೇಟಿ ನೀಡದೇ ವರದಿಯಲ್ಲಿ ಅಂಕಿ-ಅAಶ ಸೇರ್ಪಡೆಗೊಳಿಸಲಾಗಿದೆ. ವಿಶ್ವಕರ್ಮದ ಜನ ಸಂಖ್ಯೆ ೧೫ ಲಕ್ಷ ಅಂತ ತೋರಿಸಲಾಗಿದೆ. ಇದು ಸತ್ಯಕ್ಕೆ ದೂರವಾಗಿದೆ. ಅಂದಾಜಿನ ಲೆಕ್ಕ ಅಂತ ಅನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಬೆನ್ನಲಬು ರೈತರು ಆದರೇ, ರೈತರ ಬೆನ್ನೆಲಬು ವಿಶ್ವ ಕರ್ಮ ಜನಾಂಗ. ಜಾತಿ, ಮತ, ಪಂಥ ಲೆಕ್ಕೆಸಿದೇ ಗುಡಿ, ಗೋಪುರಗಳನ್ನು , ದೇವಸ್ಥಾನಗಳನ್ನು ನಿರ್ಮಿಸಿದ ಜನಾಂಗ ವಿಶ್ವ ಕರ್ಮರು. ಪ್ರತಿ ಹಳ್ಳಿಯಲ್ಲಿಯೂ ಮನೆತನಗಳು ಇವೆ. ದೇಶ, ಸಮಾಜಕ್ಕೆ ನಮ್ಮ ಜನಾಂಗದ ಕೊಡುಗೆ ಅಪಾರವಾಗಿದೆ. ಆಸ್ತಿಕ ಭಾವನೆಗಳನ್ನು ಈ ನೆಲದ ಮಣ್ಣಿಗೆ ನೀಡುತ್ತಾ ಬಂದಿದ್ದೇವೆ. ಶತಮಾನಗಳ ಇತಿಹಾಸ ಈ ಜನಾಂಗಕ್ಕೆ ಇದೆ. ಸಿಎಂ ಸಿದ್ದರಾಮಯ್ಯ ಈ ಹಿಂದೆ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣೋತ್ಸವ, ವಿಶ್ವ ಕರ್ಮ ಅಭಿವೃದ್ಧಿ ನಿಗಮ ಮಾಡಿ ಸಮಾಜಕ್ಕೆ ಕೊಡುಗೆ ನೀಡಿದ್ದೀರಿ. ಇದೀಗ ಜಾತಿ ಸಮೀಕ್ಷೆ ವರದಿಯಲ್ಲಿನ ಅಂಶಗಳು ಸಮಾಜದ ಮೇಲೆ ಕಾರ್ಮೋಡ ಆವರಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಾತಿ ಸಮೀಕ್ಷಾ ವರದಿಯಲ್ಲಿ ಆಗಿರುವ ಲೋಪದೋಷಗಳು ಸರಿಪಡಿಸಬೇಕು. ಯಾವುದೇ ಕಾರಣಕ್ಕೂ ಸದ್ಯಕ್ಕೆ ಇರುವ ಅಂಕಿ, ಅಂಶಗಳನ್ನು ಇಟ್ಟುಕೊಂಡು ವರದಿ ಜಾರಿ ಮಾಡಬಾರದು. ಇಲ್ಲವಾದಲ್ಲಿ ರಾಜ್ಯದ ನಮ್ಮ ೬೭ ಮಠಾಽಪತಿಗಳು ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಹೇಂದ್ರ ಸ್ವಾಮೀಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net