ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿದ ದಾಸ ಶ್ರೇಷ್ಠ

SRP_18-01jpj
Published on

ಶ್ರೀರಂಗಪಟ್ಟಣ: ಹರಿದಾಸ ಶ್ರೀ ಕನಕದಾಸರು 15-16ನೇ ಶತಮಾನದಲ್ಲಿ ದೇವರ ಕುರಿತ ಕೀರ್ತನೆಗಳನ್ನು ರಚಿಸಿ ಸಮಾಜದಲ್ಲಿ ಭಕ್ತಿ ಆಂದೋಲನ ಮೂಲಕ ಜಾತಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ ದಾಸ ಶ್ರೇಷ್ಠರು ಎಂದು ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವಾಲಯ ಹಾಗೂ ದೇವರ ಆರಾಧನೆಯಲ್ಲಿ ಮೇಲ್ವರ್ಗ ಮತ್ತು ಕೆಳವರ್ಗ ಎಂಬ ಭೇದದಲ್ಲಿ ಪಂಡಿತರ ನಡುವೆ ನಡೆಯುತ್ತಿದ್ದ ಜಾತಿ ವ್ಯವಸ್ಥೆಯನ್ನು ತಮ್ಮ ನಿಷ್ಕಲ್ಮಶ ಭಕ್ತಿಯ ಮೂಲಕ ಎಲ್ಲರೂ ಒಂದೇ ಎಂಬುದನ್ನು ಸಾಬೀತು ಮಾಡಿದರು. ಕಾಗಿನೆಲೆ ಆದಿಕೇಶವ ಕಾವ್ಯನಾಮದೊಂದಿಗೆ ಇವರ ರಚನೆಯ ಹರಿಭಕ್ತಿಸಾರ, ರಾಮಧಾನ್ಯ, ನಳಚರಿತ್ರೆ ಕೃತಿ ಹಾಗೂ ಸಂಕೀರ್ತನೆಗಳು ಮನುಷ್ಯನ ಬದುಕಿನ ಪರಾಮರ್ಶೆಗೆ ಸಹಕಾರಿಯಾಗಲಿದ್ದು ಕನ್ನಡ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ರಚನೆಯಾಗಿವೆ ಎಂದರು.

ಗ್ರೇಡ್-2 ತಹಸೀಲ್ದಾರ್ ಚೈತ್ರಾ, ಬಿಇಒ ಆರ್.ಪಿ.ಮಹೇಶ್, ಅಗ್ನಿಶಾಮಕ ಠಾಣಾಧಿಕಾರಿ ಪರಮೇಶ್,ಆರೋಗ್ಯ ಶಿಕ್ಷಣಾಧಿಕಾರಿ ಬೆನ್ನೂರ, ಕುರುಬರ ಸಂಘದ ತಾಲೂಕು ಅಧ್ಯಕ್ಷ ಹಂಪಾಪುರ ಕೃಷ್ಣ, ಪ್ರಧಾನ ಕಾರ್ಯದರ್ಶಿ ವಿನಯ್, ಕುರುಬರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಲೋಕೇಶ್, ನಿರ್ದೇಶಕರಾದ ಆರ್.ಭಾಸ್ಕರ್, ಹಂಪಾಪುರ ಮಹೇಶ್, ನೀಲನಕೊಪ್ಪಲು ಮುದ್ದೇಗೌಡ, ಬಿಜೆಪಿ ಮುಖಂಡ ಉಮೇಶ್ ಕುಮಾರ್, ಕರವೇ ಅಧ್ಯಕ್ಷ ಚಂದಗಾಲು ಶಂಕರ್, ಏಜಾಜ್‌ಪಾಷ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net