ಜಾತಿ ನಿಂದನೆ ಮಾಡಿರುವವನ ವಿರುದ್ಧ ಕ್ರಮ ಕೈಗೊಳ್ಳಿ

lingayat manavi
module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 46.0; hist255: 0.0; hist252~255: 0.0; hist0~15: 0.0;
Published on

ಅರಸೀಕೆರೆ: ವೀರಶೈವ ಲಿಂಗಾಯತ ಸಮುದಾಯ ಹಾಗೂ ಕೆಲ ಮುಖಂಡರ ಬಗ್ಗೆ ಅವಾಚ್ಯ ಶಬ್ದ ಬಳಸಿ ಜಾತಿ ನಿಂದನೆ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಮುಖಂಡರು ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಾನಂದ ರುದ್ರಟಿ ಅವರಿಗೆ ದೂರು ನೀಡಿದರು.

ಮಹಾಸಭಾ ಜಿಲ್ಲಾ ಉಪಾಧ್ಯಕ್ಷ ಎ.ಬಿ.ಗುರುಸಿದ್ದೇಶ್ ಮಾತನಾಡಿ, ವೀರಶೈವ ಲಿಂಗಾಯತ ಸಮುದಾಯ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ವಾಸ್ತವ ತಿಳಿಯದ ಹುಲ್ಲೇನಹಳ್ಳಿ ಜಗದೀಶ್ ಎಂಬಾತ ಮೊಬೈಲ್ ಚಾಟ್ ನಡೆಸಿ ದೊಡ್ಡ ಸಮುದಾಯ ಹಾಗೂ ಮುಖಂಡರನ್ನು ಮನಬಂದಂತೆ ನಿಂದಿಸಿರುವುದು ಅಕ್ಷಮ್ಯ. ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿರ್ದೇಶಕ ಬೋರೇಹಳ್ಳಿ ಸೋಮಶೇಖರ್, ಮುಖಂಡರಾದ ಬಿ.ಜಿ.ನಿರಂಜನ್, ಮಾದನಹಳ್ಳಿ ನಾಗರಾಜ್, ಮಲ್ಲಿಕಾರ್ಜುನ, ಕಂತೇನಹಳ್ಳಿ ಹರೀಶ್, ಚೇತನ್, ಲೋಕೇಶ್, ರೈತ ಸಂಘದ ಮುಖಂಡ ದಯಾನಂದ್, ಓಂಕಾರ ಮೂರ್ತಿ, ಕರಿಸಿದ್ದಪ್ಪ, ಗಿರೀಶ್, ಗಗನ್ ಮತ್ತಿತರರು ಹಾಜರಿದ್ದರು. ಮನವಿ ಸ್ವೀಕರಿಸಿದ ಗ್ರಾಮಾಂತರ ಠಾಣೆ ಪಿಎಸ್‌ಐ ಶಿವಾನಂದ ರುದ್ರಟಿ ಅವರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net