

ಬಾಗಲಕೋಟೆ: ಜಾತಿ ಗಣತಿ ಅವೈಜ್ಞಾನಿಕವಾಗಿದೆ. ವೀರಶೈವ ಲಿಂಗಾಯತ, ಒಕ್ಕಲಿಗ ಸಮಾಜದಲ್ಲಿ ಒಳ ಪಂಡಗಳಿವೆ. ಅವುಗಳನ್ನು ಒಡೆಯುವ ಹುನ್ನಾರ ಅಡಗಿದೆ. ಹೀಗಾಗಿ ವೀರಶೈವ ಲಿಂಗಾಯತ ಮಹಾಸಭಾ ವಿರೋಧವಿದೆ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿಯಲ್ಲಿ ಒಳ ಪಂಗಡಗಳನ್ನು ಹೈಲೇಟ್ ಮಾಡಿ ವೀರಶೈವ ಲಿಂಗಾಯತ ಸಂಪ್ರದಾಯವನ್ನು ಕಡಿಮೆ ಮಾಡುವ ಹುನ್ನಾರ ಅಡಗಿದೆ. ಒಡಕು ಸೃಷ್ಟಿಸಿ ತಪ್ಪು ದಾರಿಗೆ ಎಳೆಯುವ ಪ್ರಯತ್ನಯೂ ನಡೆದಿದೆ. ಸರ್ಕಾರದಿಂದ ಸೌಲಭ್ಯ ದೊರೆಯುತ್ತದೆ ಅಂತ ಉಪಜಾತಿಗಳನ್ನು ಓಲೈಕೆ ಮಾಡುತ್ತಿದ್ದಾರೆ. ಲಿಂಗಾಯತ, ಒಕ್ಕಲಿಗ ಪ್ರಭಲ ಸಮುದಾಯ ಹಾಗೂ ಜನ ಸಂಖ್ಯೆ ಹೊಂದಿವೆ. ಉಪಜಾತಿಗಳ ಮೂಲಕ ಒಗ್ಗಟ್ಟು ಮುರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧ ವಿದೆ ಎಂದರು.
ಬಿಟಿಡಿಎದಲ್ಲಿ ನಿವೇಶನ ಪಡೆಯಲು ನಕಲಿ ಮತದಾರರ ಪಟ್ಟಿ ಸೃಷ್ಟಿಸಿದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಭಾವಿಗಳನ್ನು ಕೈ ಬಿಟ್ಟಿದ್ದಾರೆ. ಪ್ರಕರಣದಲ್ಲಿ ಇದ್ದವರು ಈಗಾಗಲೇ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇದರ ಹಿಂದೆ ದೊಡ್ಡವರು ಇದ್ದರು. ಅವರ ಹೆಸರು ತೆಗೆದು ಕಾಟಾಚಾರಕ್ಕೆ ಪ್ರಕರಣ ದಾಖಲಿಸಿದ್ದಾರೆ. ಅರ್ಹ -Àಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡುತ್ತಿದ್ದಾರೆ. ಬಿಟಿಡಿಎ ಬೋರ್ಡ್ ಮಿಟಿಂಗ್ ಗೌಪ್ಯವಾಗಿ ನಡೆಯುತ್ತಿದೆ. ಸಿಎಂ ನಮ್ಮವರು ಇದ್ದಾರೇ ಎನ್ನುವ ಕಾರಣಕ್ಕೆ ಎಲ್ಲವು ಗುಪ್ತ ಗುಪ್ತ ಆಗಿ ಇದ್ದಾರೆ. ನಮ್ಮ ಅವಽಯಲ್ಲಿ ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಅತ್ಯಂತ ಮುಕ್ತವಾಗಿ ಇತ್ತು. ಸಾರ್ವಜನಿಕ ಕೆಲಸ ಪಾರದರ್ಶಕವಾಗಿ ನಡೆಯಬೇಕು ಎಂದು ತಿಳಿಸಿದರು.