

ಬೆಳಗಾವಿ: ಮರಾಠ ಸಮುದಾಯದವರು ಸೆ.22ರಿಂದ ಆರಂಭವಾಗಲಿರುವ ಜಾತಿ ಸಮೀಕ್ಷೆ ವೇಳೆ ಜಾತಿ ಕಾಲಂನಲ್ಲಿ ಹಿಂದು ಮರಾಠ ಎಂದು ನಮೂದಿಸಿ, ನಂತರ ಉಪ ಜಾತಿಗಳ ಹೆಸರು ಬರೆಸಬೇಕು ಎಂದು ಬಸವ ಕಲ್ಯಾಣದ ಮಾಜಿ ಶಾಸಕ, ಹಿರಿಯ ಮುಖಂಡ ಎಂ.ಜಿ.ಮುಳೆ ಹೇಳಿದರು
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸುತ್ತಿದೆ. ಾರಂ 16ರಲ್ಲಿ ಹಿಂದು, 17ರಲ್ಲಿ ಮರಾಠ ಮತ್ತು 18ರಲ್ಲಿ ಉಪಜಾತಿ ಕುಣಬಿ ಎಂದು ನಮೂದಿಸಬೇಕು. ಮಾತೃ ಭಾಷೆ ಮರಾಠಿ ಎಂದು ಬರೆಸುವಂತೆ ಕರೆ ನೀಡಿದರು. ಮರಾಠ ಸಮುದಾಯದಲ್ಲಿ ಹೆಚ್ಚಾಗಿ ಬಡವರಿದ್ದಾರೆ. ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ವಾಸ್ತವಂಶವನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸಮೀಕ್ಷೆಯಿಂದ ದೂರ ಉಳಿಯಬಾರದು ಎಂದರು.
ಶಾಸಕ ವಿಠ್ಠಲ ಹಲಗೇಕರ, ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟ ರಾಜ್ಯಾಧ್ಯಕ್ಷ ಶ್ಯಾಮಸುಂದರ ಗಾಯಕವಾಡ, ಮಾಜಿ ಶಾಸಕ
ಅನಿಲ ಬೆನಕೆ, ಕಿರಣ ಜಾಧವ ಇತರರಿದ್ದರು.