ಜಾತಿ ಆಧಾರ ಮೇಲೆ ಸಿಎಂ ಸ್ಥಾನ ಕೇಳೋದು ತಪ್ಪು

download
Published on

ಬಾಗಲಕೋಟೆ: ಜಾತಿಗೆ ಅನುಗುಣವಾಗಿ ಪಕ್ಷ ಅಧಿಕಾರ ಬರುವುದಿಲ್ಲ. ಜಾತ್ಯಾತೀತವಾಗಿ ಅಧಿಕಾರ ಬರುತ್ತದೆ. ಜಾತಿಯ ಆಧಾರ ಮೇಲೆ ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟರೆ ಅದು ತಪ್ಪು ಎಂದು ಮಾಜಿ ಸಚಿವ, ಶಾಸಕ ಶಿವಾನಂದ ಪಾಟೀಲ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಲಿಂಗಾಯತರಿಗೂ ಅಧಿಕಾರ ಸಿಕ್ಕಿದೆ. ವೀರೇಂದ್ರ ಪಾಟೀಲ ಲಿಂಗಾಯತ ಹಾಗೂ ದಕ್ಷ ಆಡಳಿತಗಾರ ಎಂದು 180 ಸ್ಥಾನಗಳನ್ನು ರಾಜ್ಯದ ಜನರು ಕೊಟ್ಟಿದ್ದರು. ಲಿಂಗಾಯತರಿಗೂ ಕೂಡ ಅವಕಾಶ ಬಂದೇ ಬರುತ್ತದೆ. ನಾನಂತು ಸಿಎಂ ಆಗುವ ನಿರೀಕ್ಷೆಯಲ್ಲಿ ಇಲ್ಲ. ನಮ್ಮ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಗುಂಪು ಇಲ್ಲ. ಆಂತರಿಕ ಭಿನ್ನಾಭಿಪ್ರಾಯ ಇದೆ. ಅದನ್ನು ನಾವು ಬಹಿರಂಗಕ್ಕೆ ಇಟ್ಟಿಲ್ಲ. ಆಂತರಿಕ ಭಿನ್ನಾಭಿಪ್ರಾಯ ಬಂದಾಗ ನಾನು ಅವರ ವಿರುದ್ದ ಪ್ರತಿಭಟನೆ ಮಾಡುತ್ತೇನೆ. ಅವರು ನಮ್ಮ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಎಂದರು.
ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಹೇಳಿಕೆಗೆ ತಿರುಗೇಟು ನೀಡಿದ ಶಿವಾನಂದ ಪಾಟೀಲ, ವಿಧಾನಸಭೆ ಚುನಾವಣೆ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಜನ ಅಽಕಾರ ಕೊಡುತ್ತಾರೆ. ಈ ನಿರೀಕ್ಷೆ ನನಗೂ ಇದೆ, ಜನಸಾಮಾನ್ಯರಿಗೂ ಇದೆ. ದೇಶದಲ್ಲಿ ಏನೇ ವಾತಾವರಣ ಇರಬಹುದು. ಕರ್ನಾಟಕದಲ್ಲಿ ಭಿನ್ನ ಇದೆ. ಕರ್ನಾಟಕದಲ್ಲಿ ಬಂಜೆನೂ ಹಡೆಯಬಹುದು ಎಂಬುದು ಆ ವೇಳೆ ತೀರ್ಮಾನ ಆಗುತ್ತದೆ ಎಂದು ಹೇಳಿದರು.ನಾನು ಯಾವ ಕಾರಣಕ್ಕೂ ಪಕ್ಷ ಬಿಡುತ್ತಿಲ್ಲ. ಆ ಸಂದರ್ಭ ಬಂದಾಗ ಹೇಳುತ್ತೇನೆ. ಹೋಗುವ ಹಾಗೇ ಇದ್ದರೇ ಹೇಳಿ ಹೋಗುತ್ತೇನೆ.ಪಕ್ಷ ಹಾಗೂ ವ್ಯಕ್ತಿ ಕೂಡಿದಾಗ ಸಮ್ಮಿಲನ ಆಗುತ್ತದೆ. ಹಿಂದೆ ವೀರೇಂದ್ರ ಪಾಟೀಲ ಕಾಂಗ್ರೆಸ್‌ಗೆ ಬಂದಾಗ ಬಹುಮತ ಸಿಕ್ಕು ಸಿಎಂ ಆದರು. ರಾಮಕೃಷ್ಣ ಹೆಗಡೆ ಅವರಿಗೆ ಪಕ್ಷ, ಜಾತಿ ಇರಲಿಲ್ಲ. ಅವರಿಗೂ ಅವಕಾಶ ಕೊಟ್ಟಿದ್ದರು. ಹೀಗೆ ವ್ಯಕ್ತಿತ್ವ ಇರತಕ್ಕಂತವರು ನಿರೀಕ್ಷೆ ಮಾಡಬಹುದು ಎಂದು ತಿಳಿಸಿದರ

ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೆಸರು ಹೇಳದೆ ಶಾಸಕ ಶಿವಾನಂದ ಪಾಟೀಲ ಮತ್ತೊಮ್ಮೆ ಬಹಿರಂಗ ಸವಾಲ್ ಹಾಕಿದರು. ನೀವು(ಯತ್ನಾಳ) ನಿಜವಾಗಲು ರಾಜಕೀಯ ಕಾರ್ಯಕರ್ತ ಆಗಿದ್ದರೆ ಪಕ್ಷದ ಹಿನ್ನಲೆಯಲ್ಲಿ ಬಾರದೇ ವ್ಯಕ್ತಿತ್ವದ ಮೇಲೆ ಬರೊದು ಇರುತ್ತದೆ. ನಿಮ್ಮಲ್ಲಿ ವ್ಯಕ್ತಿತ್ವ ಇದೆ ಅನ್ನೋದಾದರೇ ಪಕ್ಷೇತರ ಆಗಿ ಸ್ಪರ್ಧೆ ಮಾಡಿ. ಅವರ ವಿರುದ್ದ ನಾನು ಪಕ್ಷೇತರ ಆಗಿ ಸ್ಪರ್ಧೆ ಮಾಡುತ್ತೇನೆ. ಅವರು( ಯತ್ನಾಳ) ನನ್ನ ಬಗ್ಗೆ ಹಂದಿ, ನಾಯಿ ಏನೇನೋ ಅಂದಿದ್ದಾರೆ. ಒಬ್ಬ ಕೇಂದ್ರ ಸಚಿವರಾಗಿದ್ದವರಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಾನು ಇವತ್ತು ಅವರಿಗೆ ಏನು ಬೇಕಾದರು ಮಾತಾಡಬಹುದಿತ್ತು. ನನ್ನ ಬಾಯಲ್ಲಿ ಆ ಭಾಷೆ ಬರಲ್ಲ. ದೇವರು ಅವರಿಗೆ ಸದ್ಬುದ್ದಿ ಕೊಡಲಿ. ಯತ್ನಾಳ ವಿಜಯಪುರದಲ್ಲಿ ಪಕ್ಷೇತರ ಆಗಿ ಸ್ಪರ್ಧೆ ಮಾಡಿದರೆ ತಾವು ಅವರ ವಿರುದ್ದ ಪಕ್ಷೇತರ ಆಗಿ ಸ್ಪರ್ಧೆ ಕಣಕ್ಕೆ ಇಳಿಯಲು ಸಿದ್ಧ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net