ಜಾಗೃತಿ ಅಭಿಯಾನಕ್ಕೆ ಜಗಲಾಸರ ಚಾಲನೆ

bkt-3-2
Published on

ಬಾಗಲಕೋಟೆ: ಕಾರ್ಮಿಕ ಇಲಾಖೆಯಿಂದ ಕೊಡಮಾಡುವ ಅಸಂಘಟಿತ ಕಾರ್ಮಿಕರಿಗೆ ಇ-ಶ್ರಮ್ ಹಾಗೂ ಪ್ರಧಾನ ಮಂತ್ರಿಗಳ ಶ್ರಮಯೋಗಿ ಮಾನ್‍ಧನ್ ಪಿಂಚಣಿ ಯೋಜನೆ, ನೋಂದಣಿ ಕ್ಯಾಂಪ್ ಮತ್ತು ಕಾರ್ಡಗಳ ವಿತರಣೆಗೆ ಪ್ರಭಾರಿ ಅಪರ ಜಿಲ್ಲಾಧಿಕಾರಿ ಸಂತೋಷ ಜಗಲಾಸರ ಚಾಲನೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಬಾಗಲಕೋಟೆ ತಾಲೂಕಾ ಬೀದಿ ಬದಿ ವ್ಯಾಪಾರಿ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಅಸಂಘಟಿತ ವಲಯ ಕಾರ್ಮಿಕರು ಸರಕಾರದ ಯೋಜನೆಗಳಿಂದ ವಂಚಿತರಾಗಬಾರದು. ಸೌಲಭ್ಯಗಳ ಅರಿವು ಮೂಡಿಸುವ ನಿಟ್ಟಿನಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರ ಸದುಪಯೋಗವನ್ನು ಕಾರ್ಮಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನೋಂದಣಿ ಕ್ಯಾಂಪ್ ಅಳವಡಿಸಿ 195 ಈ ಶ್ರಮ್ ಮತ್ತು 46 ಪ್ರಧಾನ ಮಂತ್ರಿ ಮಾನಧನ್ ಪಿಂಚಣಿ ಕಾರ್ಡಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಶಿವಾನಂದ ಮಾದರ, ಬೀದಿ ಬದಿ ವ್ಯಾಪಾರಸ್ಥರ ಸಂಘದ ಸದಸ್ಯರಾದ ಬಾಳು ಬಾವಲತ್ತಿ, ಯಲ್ಲಪ್ಪ ಸನಕ್ಯಾನವರ, ನಾಗರಾಜ ದಳವಾಯಿ, ಮುಕ್ಕುಮಸಾಬ ದೊಡ್ಡಮನಿ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net