

ವಿಜಯವಾಣಿ ಸುದ್ದಿಜಾಲ ಕಾರವಾರ
ತಮ್ಮ ಜಮೀನಿನ ಗಡಿ ಗುರುತಿಸಿ, ಹದುಬಸ್ತು ಮಾಡಿ, ಕೃಷಿ ಮಾಡಲು ಅವಕಾಶ ನೀಡುವಂತೆ ಹಳಿಯಾಳ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ರೈತರು ಜಿಲ್ಲಾಧಿಕಾರಿ ಕಚೇರಿಯ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸಿ, ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಗೋಷ್ಠಿಯಲ್ಲಿ ಮಾತನಾಡಿದ ರೈತರ ಪರ ವಕೀಲ ಮೇಘರಾಜ ಮೇತ್ರಿ, 1969 ರಲ್ಲಿ ಕಾಳಗಿನಕೊಪ್ಪ ಗ್ರಾಮದಲ್ಲಿ 297 ರೈತರಿಗೆ ತಲಾ 4 ಎಕರೆ ಜಮೀನನ್ನು ಕೃಷಿ ಮಾಡಲು ಮಂಜೂರು ಮಾಡಲಾಗಿತ್ತು. ಆದರೆ, ಪ್ರತಿ ರೈತರ ಜಮೀನಿನ ಗಡಿ ಗುರುತಿಸಿಕೊಡದ ಕಾರಣ ಸಮಸ್ಯೆಯಾಗಿದೆ. 2013 ರಲ್ಲಿ 14 ರೈತರು ಹೈಕೋರ್ಟ್ ಮೊರೆ ಹೋಗಿದ್ದರು. 18 ತಿಂಗಳಲ್ಲಿ ಸರ್ವೇ ಮಾಡಿ, ಪ್ರತಿ ರೈತರ ಜಮೀನಿನ ಗಡಿ ಗುರುತಿಸಿಕೊಡಬೇಕು ಎಂದು ನ್ಯಾಯಾಲಯ 2015 ರಲ್ಲಿ ಆದೇಶ ನೀಡಿತ್ತು. ಅದರಂತೆ 2017 ರವರೆಗೂ ಸರ್ವೇ ಮಾಡಿ ಜಮೀನಿನ ನಕಾಶೆ ತಯಾರಿಸಲಾಗಿದೆ. ಆದರೆ, ಪ್ರಭಾವಿಗಳ ಕಾರಣದಿಂದ ಗಡಿ ಗುರುತಿಸುವ ಕಾರ್ಯವಾಗುತ್ತಿಲ್ಲ. ಕೆಲವು ಪ್ರಬಲರು ತಮ್ಮ 4 ಎಕರೆ ಜಮೀನಿನ ಜತೆಗೆ ಇತರರ ಹತ್ತಿಪ್ಪತ್ತು ಎಕರೆಯನ್ನು ತಮ್ಮ ಬಳಿ ಇಟ್ಟುಕೊಂಡು ಕಬ್ಬು, ಭತ್ತ ಬೆಳೆಯುತ್ತಿದ್ದಾರೆ.
ಹಾಗಾಗಿ ಇನ್ನೂ ಕೆಲ ಬಡ ರೈತರ ರೈತರ ಹೆಸರಿಗೆ ಜಮೀನಿದ್ದರೂ ಅದರಲ್ಲಿ ಅವರು ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ನ್ಯಾಯಾಲಯದಲ್ಲಿ ಹೋರಾಟ ಮಾಡಿದ 14 ರೈತರ ಪೈಕಿ ಈಗಾಗಲೇ 6 ಜನ ಮೃತಪಟ್ಟಿದ್ದಾರೆ. ಜನಪ್ರತಿನಿಽಗಳು, ಅಧಿಕಾರಿಗಳು ಪ್ರಭಾವಿಗಳಿಗೆ ಮಣಿದು, ಬಡ ರೈತರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ದೂರಿದರು. ವಕೀಲರಾದ ಸಂತೋಷ ಮಹಾಲೆ, ಸುಭಾಷ ವಡ್ಡರ್, ರೈತರಾದ ಮಂಜುನಾಥ ಸೋನಾರ್, ಜಯಲಕ್ಷಿ÷್ಮÃ ಫಡ್ನೀಸ್ ಇತರಿದ್ದರು.