ಜಮೀನಿನಲ್ಲಿ ಗಾಂಜಾ ಬೆಳೆದವರ ಬಂಧನ

1102 ard 01
Published on

ಔರಾದ್: ಯನಗುಂದಾ ಗ್ರಾಮದ ಬಾಡಿಗೆ ಜಮೀನಿನಲ್ಲಿ ಗಾಂಜಾ ಬೆಳೆ ಬೆಳೆದ ವ್ಯಕ್ತಿಯನ್ನು ಪತ್ತೆ ಹಚ್ಚಿರುವ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಯನಗುಂದಾದ ರಾಜಕುಮಾರ ಗೋರನಾಳೆ, ಭೀಮಶಾ ಕುದರೆ ಬಂಧಿತರು. ಬಾಡಿಗೆ ಪಡೆದ ಜಮೀನಿನಲ್ಲಿ ತೊಗರಿ ಬೆಳೆಯ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆಸಿದ್ದರು.

ರಾಜಕುಮಾರ ಎಂಬಾತ ಬಾಡಿಗೆ ಪಡೆದ ಜಮೀನಿನಲ್ಲಿ ೧೧೦ ಗಿಡ ಬೆಳೆದಿದ್ದು, ೨೬ ಕೆ.ಜಿ ೫೧೩ ಗ್ರಾಂ ತೂಕದ ಅಂದಾಜು ೧೦.೬ ಲಕ್ಷ ರೂ. ಮೌಲ್ಯದ ಹಸಿಗಾಂಜಾ ಗಿಡ ವಶಕ್ಕೆ ಪಡೆಯಲಾಗಿದೆ. ಭೀಮಶಾ ಕುದರೆ ೪೫ ಗಿಡ ಬೆಳೆದಿದ್ದು, ಈತನಿಂದ ೫ ಕೆಜಿ ೨೨೦ ಗ್ರಾಂ ತೂಕದ ೨.೮ ಲಕ್ಷ ರೂ.ಮೌಲ್ಯದ ಹಸಿ ಗಾಂಜಾ ಗಿಡ ವಶಕ್ಕೆ ಪಡೆಯಲಾಗಿದೆ.

ಗಾಂಜಾ ಬೆಳೆ ಕುರಿತು ಖಚಿತ ಮಾಹಿತಿ ಪಡೆದ ಚಿಂತಾಕಿ ಪೊಲೀಸರು ಎಸ್ಪಿ ಚೆನ್ನಬಸವಣ್ಣ, ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟಿ ಮಾರ್ಗದರ್ಶನದಲ್ಲಿ ಜಮೀನಿನ ಮೇಲೆ ದಾಳಿ ನಡೆಸಿದ್ದಾರೆ. ಚಿಂತಾಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ತಹಸೀಲ್ದಾರ್ ಮಲ್ಲಶೆಟ್ಟಿ ಚಿದ್ರೆ ಪಂಚನಾಮೆ ಮಾಡಿದರು. ಸಿಪಿಐ ರಘುವೀರಸಿಂಗ್ ಠಾಕೂರ, ಚಿಂತಾಕಿ ಪಿಎಸ್‌ಐ ಸಿದ್ಧಲಿಂಗ, ಸಂತಪುರ ಪಿಎಸ್‌ಐ ಮಹಿಬೂಬ್ ಅಲಿ, ಶಿರಸ್ತೇದಾರ ರಾಜಕುಮಾರ ಕುಲಕರ್ಣಿ, ಕರವಸೂಲಿಗಾರ ಭಾವುರಾವ ಪಾಟೀಲ್ ಇತರರಿದ್ದರು.

ಸಿಪಿಐ ರಘುವೀರಸಿಂಗ್ ಠಾಕೂರ, ಚಿಂತಾಕಿ ಪಿಎಸ್‌ಐ ಸಿದ್ಧಲಿಂಗ, ಸಂತಪುರ ಪಿಎಸ್‌ಐ ಮಹಿಬೂಬ್ ಅಲಿ, ಎಎಸ್‌ಐ ಬಸವರಾಜ, ಪೇದೆಗಳಾದ ವಿಲ್ಸನ್, ಅರುಣಸಿಂಗ್, ಸಿದ್ದೇಶ್ವರ, ಶಿವಕುಮಾರ ಸ್ವಾಮಿ, ಪ್ರಕಾಶ, ಸತೀಶ, ಗುರುಲಿಂಗ, ರಾಜಕುಮಾರ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net