

ಬಾಗಲಕೋಟೆ: ಮತಯಾಚನೆಗಾಗಿ ನಾನು ಬಾಗಲಕೋಟೆ ಮತಕ್ಷೇತ್ರದ ಮನೆಮನೆಗೆ ಭೇಟಿ ನೀಡಿದಾಗ ಜನರು ತೋರುತ್ತಿರುವ ಪ್ರೀತಿ, ವಿಶ್ವಾಸ ಗಮನಿಸಿದಾಗ ಈ ಬಾರಿಯ ಚುನಾವಣೆಯಲ್ಲಿ ಭಾರಿ ಪ್ರಮಾಣದ ಅಂತರದಲ್ಲಿ ಬಿಜೆಪಿ ಜಯಭೇರಿ ಭಾರಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ, ಶಾಸಕ ಡಾ.ವೀರಣ್ಣ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ೩ನೇ ವಾರ್ಡನಲ್ಲಿ ಚುನಾವಣಾ ಪ್ರಚಾರದ ಪಾದಯಾತ್ರೆ ಮೂಲಕ ಮನೆ ಮನೆ ತೆರಳಿ ಮತಯಾಚನೆ ಮಾಡಿ ಮಾತನಾಡಿದ ಅವರು, ನಗರದಲ್ಲಿ ಪಾದಯಾತ್ರೆಯ ಮೂಲಕ ಮನೆ ಮನೆಗೆ ಭೇಟಿ ನೀಡಿದಾಗ ಪ್ರತಿಯೊಬ್ಬರು ಅಭಿಮಾನ, ಪ್ರೀತಿ, ವಿಶ್ವಾಸ ನೋಡಿದರೆ ಬಿಜೆಪಿ ಗೆಲುವು ಶತಸಿದ್ದ ಎನ್ನುವ ಭಾವನೆ ನನ್ನಲ್ಲಿ ಮೂಡಿದೆ. ದಿನದಿಂದ ದಿನಕ್ಕೆ ಪಾದಯಾತ್ರೆಯಲ್ಲಿ ಜನರ ಸಂಖ್ಯೆಯು ಹೆಚ್ಚಳವಾಗುತ್ತಿದೆ ಎಂದರು.
ಬಾಗಲಕೋಟೆ ಮತಕ್ಷೇತ್ರಕ್ಕೆ ೬,೦೦೦ ಕೋಟಿ ರೂ. ಬೃಹತ್ ಮೊತ್ತದ ಅನುದಾನವನ್ನು ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಮತದಾರ ಬಂಧುಗಳು ಕೂಡಾ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಗಮನಿಸಿ ಮತ್ತೊಮ್ಮೆ ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿಯನ್ನು ಅರಳಿಸಲಿದ್ದಾರೆ ಎನ್ನುವ ವಿಶ್ವಾಸ ನನ್ನಲ್ಲಿದೆ ಎಂದರು.
ಪಾದಯಾತ್ರೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಸದಸ್ಯೆ ಶಿವಲೀಲಾ ಪಟ್ಟಣಶೆಟ್ಟಿ, ವಿಶ್ವನಾಥ ವೈಜಾಪುರ, ಶಿವಾನಂದ ಟವಳಿ, ಹನಮಂತ ದರೆನ್ನವರ, ಮಲ್ಲಿಕಾರ್ಜುನ ಜಕ್ಕಲಿ, ಯಮನಪ್ಪ ಅರಳಿಕಟ್ಡಿ, ಹರೀಶ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಅಪ್ರಚಾರಕ್ಕೆ ಜನ ಕೀವಿಗೊಡಲ್ಲ
ಬಾಗಲಕೋಟೆ: ಯಾರು ಎಷ್ಟೇ ಅಪ್ರಚಾರ ಮಾಡಿದರು ಬಿಜೆಪಿ ಗೆಲ್ಲುವುದು ಶತಸಿದ್ದ ಆದ್ದರಿಂದ ಬಿಜೆಪಿ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಚುನಾವಣೆ ಮಾಡಿರಿ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ನವನಗರದ ೩೦ ನೇ ಸೆಕ್ಟರನಲ್ಲಿ ಭಾರತೀಯ ಜನತಾ ಪಕ್ಷದ ಚುನಾವಣಾ ಕಾರ್ಯಲಯವನ್ನು ಉದ್ಘಾಟನೆ ಮಾಡಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ನಮ್ಮ ಅಭಿವೃದ್ಧಿ ಕೆಲಸಗಳೇ ಮಾತನಾಡುತ್ತವೆ. ಸೋಲುವ ಭೀತಿಯಿಂದ ಅಪ್ರಚಾರ ಮಾಡಿ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಮಾಡುತ್ತಾ ಇದ್ದಾರೆ. ಯಾರೂ ತಲೆಕೆಡಿಸಿಕೊಳ್ಳಬೇಡಿ. ಆತ್ಮವಿಶ್ವಾಸದಿಂದ ಚುನಾವಣೆಯಲ್ಲಿ ಕೆಲಸ ಮಾಡಿ. ಭಾರತೀಯ ಜನತಾ ಪಕ್ಷ ಜಗತ್ತಿನಲ್ಲಿಯೆ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿದ ಪಕ್ಷವಾಗಿದೆ. ಬಿಜೆಪಿ ಗೆಲುವ ಶತಸಿದ್ದ ಇದೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಪ್ರಭು ಹಡಗಲಿ, ಯಲ್ಲಪ್ಪ ಬೆಂಡಿಗೇರಿ, ವಿಜಯ ಚೆಟ್ಡರಕಿ, ಜೆ.ಬಿ.ಬೂದಿಹಾಳ, ವೀರಣ್ಣ ಹಳೆಗೌಡರ, ಶರಣ ಅಲ್ಲಮಪ್ರಭು ನಾವಲಗಿ ಇದ್ದರು.