ಜನರ ಸಮಸ್ಯೆಗಳಿಗೆ ಸ್ಪಂದಿಸಿ

04BTP01
Published on

ಬೆಟ್ಟದಪುರ: ಜನರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಪಂದಿಸುವ ಮೂಲಕ ಪರಿಹರಿಸಬೇಕು ಎಂದು ಪಶುಸಂಗೋಪನಾ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪರದಹಳ್ಳಿ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಅಧಿಕಾರಿಗಳು ಜನರ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಿದರೆ ಅವರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ಬರುವುದಿಲ್ಲ ಎಂದರು.

ಈಗಾಗಲೇ ಚಪ್ಪರದಹಳ್ಳಿ ಗ್ರಾಮಕ್ಕೆ ಜನರ ಬೇಡಿಕೆಯಂತೆ ಅನುದಾನ ನೀಡುವ ಮೂಲಕ ಕೆಲಸಗಳನ್ನು ಮಾಡಿಕೊಡಲಾಗಿದೆ. ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಕಾರ ನೀಡಲಾಗುವುದು ಎಂದರು.

ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮದ ಸಾರ್ವಜನಿಕರು ಆಗಮಿಸಿ ತಮ್ಮ ಸಮಸ್ಯೆಗಳನ್ನು ತೆರೆದಿಟ್ಟರು. ಸಮಸ್ಯೆ ಆಲಿಸಿದ ಸಚಿವರು ಅಧಿಕಾರಿಗಳಿಗೆ ಸೂಚಿಸಿ ಬಗೆಹರಿಸುವಂತೆ ತಿಳಿಸಿದರು.

ತಹಸೀಲ್ದಾರ್ ನಿಸರ್ಗಪ್ರಿಯಾ, ತಾಪಂ ಇಒ ಸುನಿಲ್ ಕುಮಾರ್, ಬಿಸಿಎಂ ತಾಲೂಕು ಅಧಿಕಾರಿ ಕೃಷ್ಣೇಗೌಡ, ಕೆಆರ್‌ಐಡಿಎಲ್ ಇಂಜಿನಿಯರ್ ವಿಜಯ್, ಮುಖಂಡರಾದ ಹೊಲದಪ್ಪ, ಕಾಳೇಗೌಡ, ಪುಟ್ಟಸ್ವಾಮಿಗೌಡ, ರಾಮೇಗೌಡ, ಶೇಖರ್, ಪುಟ್ಟರಾಜು, ಅಣ್ಣೇಗೌಡ, ವಕೀಲ ಸುಂದ್ರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾ.ಸದಸ್ಯ ಸಿ.ಜೆ.ರವಿ, ಟಿಎಪಿಸಿಎಂಎಸ್ ನಾಮನಿರ್ದೇಶಿತ ಸದಸ್ಯ ಸಿ.ಎನ್. ರಾಜೇಶ್, ಗ್ರಾಮದ ಮುಖಂಡರಾದ ಸಿ.ಕೆ.ಪ್ರಕಾಶ, ರಾಮೇಗೌಡ, ನಾರಾಯಣ, ಬಸವರಾಜು, ಈ.ರಾಜು, ಅಂಜನಿಗೌಡ, ಯೋಗೇಶಗೌಡ, ವಿಶ್ವನಾಥ್, ಸಿ.ಪಿ.ರಘು, ವೆಂಕಟೇಶ್, ಚಂದ್ರಶೇಖರ್, ಮಲ್ಲೇಶ್, ಪುನೀತ್, ರಾಜಭೋವಿ, ಶಿವ, ಜನಾರ್ದನ, ಸಿ.ಜಿ.ರವಿ, ಮಹೇಶಮೂರ್ತಿ, ಕೃಷ್ಣೇಗೌಡ, ಪುಟ್ಟರಾಜು, ಶೇಖರ್, ಸತೀಶ್, ಮಂಜುನಾಥ್, ಸುರೇಶ, ಮಂಜುಆರಾಧ್ಯ, ಕಾಳೇಗೌಡ, ಚತುರ, ಗ್ರಾಮದ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net