ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ

bkt-21-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕಾನಿಪ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ವಿ.ಪ ವಿರೋಧ ಪಕ್ಷದ ಮಾಜಿ ನಾಯಕ ಎಸ್.ಆರ್.ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾನಿಪ ಜಿಲ್ಲಾಧ್ಯಕ್ಷ ಆನಂದ ಧಲಬಂಜನ್, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ, ಪತ್ರಕರ್ತರಾದ ಬಸವರಾಜ ಹವಾಲ್ದಾರ, ರವಿರಾಜ ಗಲಗಲಿ ಇದ್ದರು.
Published on

ಬಾಗಲಕೋಟೆ: ಕೆರೆ ಒತ್ತುವರಿ, ಜಮೀನುಗಳಿಗೆ ದಾರಿ, ಮಾಶಾಸನ, ಭೂಮಿ ಸವಳು-ಜವಳು ಸೇರಿದಂತೆ ಹತ್ತು ಹಲವು ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ ಸ್ಪಂದಿಸುವ ಮೂಲಕ ಕೆಲವೊಂದು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಬಗೆಹರಿಸಿದರು.
ತಾಲೂಕಿನ ಬೇವೂರ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ತಂದ ಸಮಸ್ಯೆಗಳಿಗೆ ಉತ್ತರಿಸಿದ ಜಿಲ್ಲಾಽಕಾರಿ ಈಗಾಗಲೇ ಸವಳು-ಜವಳು ಭೂಮಿಯ ಬಗ್ಗೆ ನಿಗಾ ವಹಿಸಲಾಗಿದೆ. ಗ್ರಾಮದಲ್ಲಿರುವ ೨೩.೧೩ ಎಕರೆ ವಿಸ್ತರಣೆ ಹೊಂದಿದ ಕೆರೆಯ ದಾಖಲೆ ಇದ್ದು, ಈಗಾಗಲೇ ೧೫ ಎಕರೆ ಒತ್ತುವರಿಯಾಗಿದೆ. ಅದರಲ್ಲಿ ೧೬೬ ಮನೆಗಳು, ಬಣವಿ ಸೇರಿಕೊಂಡಿದೆ. ಬಣವಿಗಳನ್ನು ತಕ್ಷಣ ತೆರವುಗೊಳಿಸಲಾಗುತ್ತಿದೆ. ಆದರೆ ಮನೆಗಳಿಗೆ ತೆರವುಗೊಳಿಸಲು ಕಾಲಾವಕಾಶ ನೀಡಲಾಗುತ್ತಿದೆ ಎಂದರು.
ಮನೆ ಕಟ್ಟಿಕೊಳ್ಳಲು ಸರ್ಕಾರದ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಜಮೀನನ್ನು ನೀಡಲು ಕ್ರಮವಹಿಸುವ ಮೂಲಕ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುತ್ತಿದೆ. ಬೇವೂರ ಗ್ರಾಮದ ಸಮೀಪದ ಕಲಗುಡಿ ಗ್ರಾಮದಲ್ಲಿ ಪುರಾತನ ದೇವಾಲಯಗಳಿದ್ದು, ಅಲ್ಲಿ ವಾಸಿಸುವ ಗ್ರಾಮಸ್ಥರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ನಡುವೆ ಉಂಟಾದ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ನಿವಾಸಿಗಳಿಗೆ ಮೂಲ ಸೌಕರ್ಯ ಒದಗಿಸಿಕೊಡುವ ಭರವಸೆ ನೀಡಿದರು.
ಸಂಗಾಪುರ ಗ್ರಾಮದ ರೈತನ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಿಮ್ಮಾಪೂರ ಏತ ನೀರಾವರಿಯ ಕಾಲುವೆಯಿಂದ ನೀರು ಸೋರಿಕೆಯಾಗಿ ಜಮೀನು ಸವಳು-ಜವಳು ಉಂಟಾಗಿದೆ. ಇಲ್ಲಿಯವರೆಗೆ ಸವಳು-ಜವಳುಗೊಂಡ ಜಮೀನಿಗೆ, ಹೊಲದಲ್ಲಿ ಹಾಯ್ದು ಹೋದ ಕಾಲುವೆ ನಿರ್ಮಾಣದಿಂದ ಯಾವುದೇ ರೀತಿಯ ಪರಿಹಾರ ಧನ ದೊರೆತಿರುವದಿಲ್ಲವೆಂದಾಗ ಈ ಸಮಸ್ಯೆ ಕುರಿತು ಕೃಷ್ಣಾ ಭಾಗ್ಯ ಜಲ ನಿಗಮ ಅಽಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕೊಡಿಸುವ ಕೆಲಸ ಮಾಡುವುದಾಗಿ ತಿಳಿಸಿದರು.
ಇದಲ್ಲದೇ ಅನಾದಿಕಾಲದಿಂದ ಬಳಸಿಕೊಂಡು ಬಳಸಿಕೊಂಡು ಬರುತ್ತಿದ್ದ ಹೊಲಗಳಿಗೆ ಹೋಗುವ ದಾರಿಯಿಂದ ಸಮಸ್ಯೆ ಉಂಟಾಗುತ್ತಿದೆ. ಅಂತವುಗಳಿಗೆ ಗ್ರಾಮಸ್ಥರೆ ಕೂಡಿಕೊಂಡು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಗ್ರಾಮ ನಕಾಶೆಯಲ್ಲಿ ದಾರಿ ಇದ್ದರೆ ಮಾತ್ರ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಗ್ರಾಮ ಲೆಕ್ಕಾಽಕಾರಿಗಳು ಸ್ಥಳೀಯವಾಗಿ ಇರದೇ ಕಾರಣ ಗ್ರಾಮದ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದಾಗ ಸ್ಥಳೀಯವಾಗಿ ಕಚೇರಿಯಲ್ಲಿ ಇರುವಂತೆ ನಿರ್ದೇಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬೇವೂರ ಗ್ರಾ.ಪಂ ಅಧ್ಯಕ್ಷ ತುಕಾರಾಮ ಮಾಗಿ, ತಹಶೀಲ್ದಾರ ವಿನಯ ಕುಲಕರ್ಣಿ, ಆಹಾರ ಇಲಾಖೆ ಜಂಟಿ ನಿರ್ದೇಶಕ ಚನಬಸಪ್ಪ ಕೊಡ್ಲಿ, ಡಿಡಿಎಲ್‌ಆರ್ ರವಿಕುಮಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕಿ ಅಕ್ಕಮಹಾದೇವಿ ಕೆ.ಎಚ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net