ಜನರ ಬೆಂಬಲದೊಂದಿಗೆ ಬಂದರು ಕಾಮಗಾರಿ

23KWR7
Published on

ಕಾರವಾರ: ಜಿಲ್ಲೆಯ ಕರಾವಳಿಯಲ್ಲಿ ಬಂದರು ಹಾಗೂ ಇತರ ಅಭಿವೃದ್ಧಿ ಯೋಜನೆಗಳ ನಿರ್ವಣಕ್ಕೆ ಶೀಘ್ರ ಮೀನುಗಾರ ಮುಖಂಡರ ಸಭೆ ಕರೆಯಲು ತೀರ್ವನಿಸಲಾಗಿದೆ.

ಸಚಿವ ಶಿವರಾಮ ಹೆಬ್ಬಾರ ಹಾಗೂ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಗುರುವಾರ ಉನ್ನತ ಮಟ್ಟದ ಸಭೆ ನಡೆಯಿತು. ಕಾರವಾರ ಹಾಗೂ ಹೊನ್ನಾವರದಲ್ಲಿ ನಿರ್ವಣವಾಗುತ್ತಿರುವ ಬಂದರುಗಳ ಕುರಿತು ಅಧಿಕಾರಿಗಳು ವಿವರ ನೀಡಿದರು.

ಸಚಿವ ಶಿವರಾಮ ಹೆಬ್ಬಾರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಜನ ಸೀಬರ್ಡ್, ಕೈಗಾ, 6 ಅಣೆಕಟ್ಟೆಗಳಿಗಾಗಿ ಭೂಮಿ ಕಳೆದುಕೊಂಡಿದ್ದಾರೆ. ಆದರೆ, ನಿರಾಶ್ರಿತರಾದವರಿಗೆ ಪರಿಹಾರ ಸರಿಯಾಗಿ ಸಿಕ್ಕಿಲ್ಲ. ಅಲ್ಲದೆ, ಯೋಜನೆಗಳಿಂದ ಜಿಲ್ಲೆಯ ಜನರಿಗೆ ಉದ್ಯೋಗದಂಥ ಪರ್ಯಾಯ ಪ್ರಯೋಜನಗಳೂ ಸಿಕ್ಕಿಲ್ಲ. ಇದರಿಂದ ಯಾವುದೇ ಯೋಜನೆ ಬಂದರೂ ಜನ ವಿರೋಧ ಮಾಡುತ್ತಾರೆ. ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆಲ್ಲುವುದು ಒಂದು ಭಾಗ. ಇನ್ನೊಂದು ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಅವರೊಟ್ಟಿಗೆ ಮಾತನಾಡಿದಾಗ ಜನರ ಬೆಂಬಲದೊಂದಿಗೆ ಯೋಜನೆ ನಿರ್ವಿುಸಬಹುದು. ಈ ನಿಟ್ಟಿನಲ್ಲಿ ಮೀನುಗಾರರ ಸಭೆ ನಡೆಸಬೇಕಿದೆ. ಅಧಿಕಾರಿಗಳು ನಮ್ಮ ಆಲೋಚನೆಗಳನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದು ಸೂಚಿಸಿದರು.

ಮೀನುಗಾರ ಮುಖಂಡರ ಸಭೆಯನ್ನು ಇನ್ನು 8-10 ದಿನದಲ್ಲಿ ಕರೆದು ಚರ್ಚೆ ಮಾಡುವುದಾಗಿ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಹೊನ್ನಾವರದಲ್ಲಿಯೇ ಪ್ರತ್ಯೇಕ ಸಭೆ ಮತ್ತು ಬೆಂಗಳೂರಿನಲ್ಲಿ ಮೀನುಗಾರ ಮುಖಂಡರ ಇನ್ನೊಂದು ಸಭೆ ನಡೆಸಲು ದಿನಾಂಕ ನಿಗದಿ ಮಾಡುವ ಬಗ್ಗೆ ಚರ್ಚೆ ನಡೆಯಿತು. ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಸುನೀಲ ನಾಯ್ಕ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ ಇದ್ದರು.

ಒಳಚರಂಡಿ ಕಾಮಗಾರಿ ಚರ್ಚೆ: ಜಿಲ್ಲೆಯ ನಗರ ಪ್ರದೇಶಗಳ ಒಳ ಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿಗಳ ಕುರಿತು ಸಚಿವ ಶಿವರಾಮ ಹೆಬ್ಬಾರ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹಾಗೂ ಅಧಿಕಾರಿಗಳ ಜತೆ ಸಭೆ ನಡೆಸಿದರು. ಕುಮಟಾದಲ್ಲಿ ಒಳಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹಳಿಯಾಳ ಹೊನ್ನಾವರದಲ್ಲಿ ಕಾಮಗಾರಿ ನಡೆಯುತ್ತಿದ್ದು, ಕೆಲ ಆಕ್ಷೇಪಗಳೂ ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಸಚಿವರು ಮಾಹಿತಿ ಪಡೆದು, ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net