

ಬಾಗಲಕೋಟೆ: ಜನನ, ಮರಣ ನೋಂದಣಿ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ನೋಂದಣಿ ಕಾರ್ಯದಲ್ಲಿ ವಿಳಂಬವಾದಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅಽಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜನನ, ಮರಣ ನೋಂದಣಿ, ಬೆಳೆ ಅಂದಾಜು ಸಮೀಕ್ಷೆ ಹಾಗೂ ಬೆಳೆ ಅಂಕಿ ಅಂಶಗಳ ಕುರಿತು ಜರುಗಿದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೨೦೧೫ ರಿಂದ ಇ-ಜನ್ಮ ತಂತ್ರಾಂಶ ಪ್ರಾರಂಭವಾದ ನಂತರ ಆರೋಗ್ಯ ಸಂಸ್ಥೆಗಳಲ್ಲಿ ಜನನ, ಮರಣ ಘಟನೆಗಳು ನೋಂದಣಿಯಾಗದೇ ಇರುವುದು ಕಂಡು ಬಂದಿದೆ. ಇದರಿಂದ ಸಾರ್ವಜನಿಕರು ಪ್ರಮಾಣ ಪತ್ರಗಳಿಂದ ವಂಚಿತರಾಗುತ್ತಿದ್ದಾರೆ. ಜನನ, ಮರಣ ಹಾಗೂ ನಿರ್ಜೀವ ಜನನ ಕಾನೂನು ಭಾಗಗಳನ್ನು ಅವು ಯಾವ ವರ್ಗಕ್ಕೆ ಸಂಬಂದ ಪಡುತ್ತದೆಯೋ ಆ ಕ್ಯಾಲೆಂಡರ್ ವರ್ಷ ಮುಗಿದ ನಂತರ ೧೨ ತಿಂಗಳವರೆಗೆ ತಮ್ಮಲ್ಲಿ ಸಂರಕ್ಷಿಸಿ, ನಂತರ ವಹಿಗಳೊಂದಿಗೆ ಸಂರಕ್ಷಣಾಽಕಾರಿಗಳಿಗೆ ಹಸ್ತಾಂತರಿಸಲು ನಿರ್ದೇಶನ ನೀಡಿದರು.
ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬೀಮಾ (ವಿಮಾ) ಯೋಜನೆಯಡಿ ಮುಂಗಾರು ಋತುವಿಗೆ ಜಿಲ್ಲೆಯಲ್ಲಿ ೩೨೪೪ ಬೆಳೆ ಕಟಾವು ಪ್ರಯೋಗಗಳು ಅಽಸೂಚಿಸಲಾಗಿದ್ದು, ಅದರಲ್ಲಿ ಕಂದಾಯ ಇಲಾಖೆಗೆ ೧೩೭೬, ಆರ್.ಡಿ.ಪಿ.ಆರ್, ಇಲಾಖೆಗೆ ೧೧೬೮, ತೋಟಗಾರಿಕೆ ಇಲಾಖೆಗೆ ೩೭೦ ಹಾಗೂ ಕೃಷಿ ಇಲಾಖೆಗೆ ೩೩೦ ಬೆಳೆ ಕಟಾವು ಪ್ರಯೋಗಗಳು ಹಂಚಿಕೆಯಾಗಿವೆ. ಯಾವುದೇ ಪ್ರಯೋಗಗಳು ವ್ಯತ್ಯಾಸವಾಗದಂತೆ ನೋಡಿಕೊಳ್ಳಲು ಸಂಬಂಽಸಿದ ಇಲಾಖೆಗಳ ಮುಖ್ಯಸ್ಥರುಗಳಿಗೆ ತಿಳಿಸಿದರು.
ಬೆಳೆ ಸಮೀಕ್ಷೆ ಕುರಿತು ಜಿಲ್ಲೆಯಲ್ಲಿ ಪಿ.ಆರ್‌ಗಳು ಬೆಳೆ ಸಮೀಕ್ಷೆಯ ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಮೀಕ್ಷೆಯ ಮೇಲ್ವಿಚಾರಣೆಯನ್ನು ಸರಿಯಾಗಿ ಪರಿಶೀಲನೆ ಕೈಗೊಳ್ಳಲು ಸಂಬಂಽಸಿದ ಇಲಾಖಾ ಮುಖ್ಯಸ್ಥರುಗಳಿಗೆ ಸೂಚಿಸುವದರ ಜೊತೆಗೆ ಈ ಕುರಿತು ಜಂಟಿ ಕೃಷಿ ನಿರ್ದೇಶಕರು ಮತ್ತು ತೋಟಗಾರಿಕೆ ಉಪನಿರ್ದೇಶಕರು ಒಳಗೊಂಡಂತೆ ಪುನರ್ ಪರಿಶೀಲನಾ ಸಮಿತಿ ಸಭೆಯನ್ನು ರಚಿಸಿ ಸಮೀಕ್ಷೆಯ ನಿಖರತೆಯನ್ನು ಪರಿಶೀಲಿಸಲು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಂಟಿ ಕೃಷಿ ನಿರ್ದೇಶಕ ಎನ್.ಐ.ರೂಢಗಿ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಜಿ.ಪಿ.ಸುಂಕದ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ತಹಸೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ವಿವಿಧ ತಾಲೂಕಿನ ತಹಸೀಲ್ದಾರರು ಉಪಸ್ಥಿತರಿದ್ದರು.