ಜನತಾ ನ್ಯಾಯಾಲಯದಲ್ಲಿ 5317 ಪ್ರಕರಣಗಳು ಇತ್ಯರ್ಥ

Published on

ಪಾಂಡವಪುರ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಡಿ.14ರಂದು ಬೃಹತ್ ಜನತಾ ನ್ಯಾಯಾಲಯದಲ್ಲಿ 5631 ಪ್ರಕರಣಗಳಲ್ಲಿ 5317 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.

ಸಂಯೋಜಿತ ಕ್ರಿಮಿನಲ್ ಅಪರಾಧದಡಿಯಲ್ಲಿ ದಾಖಲಾಗಿದ್ದ 11 ಪ್ರಕರಣಗಳಲ್ಲಿ 5 ಇತ್ಯರ್ಥಗೊಂಡಿವೆ. ಎನ್‌ಐ ಕಾಯ್ದೆ 138ರಡಿಯಲ್ಲಿ ದಾಖಲಾಗಿದ್ದ 89 ಪ್ರಕರಣಗಳ ಪೈಕಿ 39 ಪ್ರಕರಣ, ಹಣ ವಸೂಲಾತಿ ಪ್ರಕರಣದ 20 ರಲ್ಲಿ 6, ಎಂಎಸಿಟಿ 98 ಕೇಸುಗಳಲ್ಲಿ 44, ವಿಭಾಗ ದಾವೆಯ 23 ಪ್ರಕರಣಗಳಲ್ಲಿ 11, ಎಲ್‌ಎಸಿ ಪ್ರಕರಣದ 6ರಲ್ಲಿ 4, ಎಂವಿಸಿಯ 42 ಪ್ರಕರಣಗಳಲ್ಲಿ 14, ಪೇಟಿ ಕೇಸ್‌ಗಳಲ್ಲಿ 72ರಲ್ಲಿ 71 ಹಾಗೂ ಇತರ ಕ್ರಮಿನಲ್ ಪ್ರಕರಣಗಳ 23ರಲ್ಲಿ 11 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟಾರೆ ಎಲ್ಲ ಪ್ರಕರಣಗಳಿಂದ 3,50,27, 937 ಕೋಟಿ ರೂ.ಪಾವತಿಸಿಕೊಳ್ಳಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ಬಿ.ಪಾರ್ವತಮ್ಮ ಮಾತನಾಡಿ, ಪೂರ್ವ ದಾವೆ ಪ್ರಕರಣಗಳಲ್ಲಿ ಬ್ಯಾಂಕ್ ಸಂಬಂಧಿತ ದಾಖಲಾಗಿದ್ದ 110 ಪ್ರಕರಣಗಳಲ್ಲಿ 8, ಭೂ ವ್ಯಾಜ್ಯದ 150 ಪ್ರಕರಣಗಳಲ್ಲಿ 150, ಕಂದಾಯ ಪ್ರಕರಣಗಳಲ್ಲಿ ದಾಖಲಾಗಿದ್ದ 4045 ಕೇಸುಗಳಲ್ಲಿ 4045 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಟ್ರಾಫಿಕ್ ಪ್ರಕರಣಗಳಲ್ಲಿ 870ರಲ್ಲಿ 870 ಇತರ ಕ್ರಿಮಿನಲ್ ಪ್ರಕರಣಗಳಲ್ಲಿ ದಾಖಲಾಗಿದ್ದ 11ರಲ್ಲಿ 11 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಒಟ್ಟಾರೆ ದಾಖಲಾಗಿದ್ದ 5186 ಪ್ರಕರಣಗಳಲ್ಲಿ 5084 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿವೆ. ಈ ಪ್ರಕರಣಗಳಲ್ಲಿ 990288 ರೂ.ಪಾವತಿಸಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನ್ಯಾಯಾಲಯದ ಸಿಬ್ಬಂದಿ ಮಂಚಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net