ಜನ-ಜಾನುವಾರು ಸ್ಥಳಾಂತರ

e00e0f61-bd16-43f2-af39-e9a49c048312
Published on

ಬಾಗಲಕೋಟೆ: ಕೃಷ್ಣಾ ಮತ್ತು ಫಟಪ್ರಭಾ ನದಿ ಪಾತ್ರಗಳಲ್ಲಿ ಕೆಲವು ಗ್ರಾಮಗಳಿಗೆ ಪ್ರವಾಹ ಸ್ಥಿತಿ ಎದುರಾಗಿದೆ. ಈ ವರೆಗೂ ಒಟ್ಟು 6 ಗ್ರಾಮಗಳ 98 ಕುಟುಂಬಗಳ 352 ಜನರು ಹಾಗೂ 642 ಜಾನುವಾರುಗಳನ್ನ ಸ್ಥಳಾಂತರ ಮಾಡಲಾಗಿದೆ..


ಈ ಪೈಕಿ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ಒಟ್ಟು 19 ಕುಟುಂಬಗಳ 9 ಮಕ್ಕಳು ಸೇರಿ 91 ಜನರನ್ನ ಎರಡು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ರಬಕವಿ ಬನಹಟ್ಟಿ ತಾಲೂಕಿನ ನಂದಗಾಂವ 38 ಕುಟುಂಬಗಳ 10 ಮಕ್ಕಳು ಒಳಗೊಂಡು 161 ಜನರು ಆಶ್ರಯ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಾಳಜಿ ಕೇಂದ್ರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ.

ಕೃಷ್ಣಾ ನದಿ ವ್ಯಾಪ್ತಿಯ ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದಲ್ಲಿ ನಾಲ್ಕು ಕುಟುಂಬಗಳ 20 ಜನರು ಕಾಳಜಿ ಕೇಂದ್ರದಲ್ಲಿ ಇದ್ದಾರೆ. ಜಮಖಂಡಿಯ ಮುತ್ತೂರು ನಡುಗಡ್ಡೆಯ 26 ಕುಟುಂಬಗಳ 143 ಜನರು ತಮ್ಮ ಸ್ವಂತ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ತುಬುಚಿ ಹಾಗೂ ಟಕ್ಕಳಕಿ ಗ್ರಾಮಗಳ ಒಟ್ಟು 11 ಕುಟುಂಬಗಳ 39 ಜನರು ಸಹ ತಮ್ಮ ಸ್ವಂತ ಹಾಗೂ ಸಂಬಂಧಿಕರ ಮನೆಗಳಿಗೆ ಸ್ಥಳಾಂತರವಾಗಿದ್ದಾರೆ ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಂಜೆ ನೀರಿನ ಹರಿವು ಮತ್ತಷ್ಡು ಹೆಚ್ಚಳ:

ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರೆದ ಹಿನ್ನಲೆ ಶನಿವಾರ ಸಂಜೆ ವೇಳೆಗೆ ಕೃಷ್ಣಾ ಮತ್ತು ಘಟಪ್ರಭಾ ನದಿಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗಿದೆ.

ಘಟಪ್ರಭಾ ನದಿಗೆ 81006 ಕ್ಯೂಸೆಕ್ ಗೆ ಏರಿಕೆ ಆಗಿದ್ದರೆ, ಹಿಪ್ಪರಗಿ ಜಲಾಶಯಕ್ಕೆ 2.62 ಲಕ್ಷ ಕ್ಯೂಸೆಕ್ ಗೆ ಹೆಚ್ಚಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net