ಕಲಬುರಗಿ: ಧಾರ್ಮಿಕ, ಅಧ್ಯಾತ್ಮ, ಸಾಂಸ್ಕೃತಿಕ ಜಾಗೃತಿ ಮೂಡಿಸಲು ನೆಹರು ಗಂಜ್‌ನ ಶ್ರೀ ನಗರೇಶ್ವರ ಶಾಲೆಯಿಂದ ಭಾನುವಾರ ಮಧ್ಯಾಹ್ನ ೨ರಿಂದ ಶ್ರೀ ಜಗನ್ನಾಥ ರಥಯಾತ್ರೆ ನಗರದ ಪ್ರಮುಖ ಮಾರ್ಗಗಳಲ್ಲಿ ನಡೆಯಲಿದೆ ಎಂದು ಕಲಬುರಗಿ ಇಸ್ಕಾನ್ ಪ್ರಮುಖ ಉದ್ಧವಾನಂದ ದಾಸ್ ತಿಳಿಸಿದರು.
ನಗರೇಶ್ವರ ಶಾಲೆಯಿಂದ ಶುರುವಾಗುವ ರಥಯಾತ್ರೆ ಕಿರಾಣ ಬಜಾರ್, ಚೌಕ್ ಪೊಲೀಸ್ ಠಾಣೆ, ಜಗತ್ ವೃತ್ತ, ಗೋವಾ ಹೋಟೆಲ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಡಾ.ಎಸ್.ಎಂ. ಪಂಡಿತ ರಂಗಮAದಿರಕ್ಕೆ ಬಂದು ಸಮಾರೋಪಗೊಳ್ಳಲಿದೆ. ಮಾರ್ಗದುದ್ದಕ್ಕೂ ಭಜನೆ, ಕೀರ್ತನೆ, ವಾದ್ಯ ಮೇಳಗಳ ವೈಭವ ಇರಲಿದೆ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಜೆ ೬ಕ್ಕೆ ರಂಗಮAದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ೭ಕ್ಕೆ ಪ್ರವಚನ, ೮.೩೦ಕ್ಕೆ ಪೂಜೆ ಮತ್ತು ಮಹಾ ಆರತಿ ಬಳಿಕ ಮಹಾಪ್ರಸಾದ ಇರಲಿದೆ. ಮಾಹಿತಿಗೆ ಮೊ.೯೯೦೧೫ ೮೮೮೯೧, ೯೭೪೦೪ ೦೨೬೩೯ಗೆ ಸಂಪರ್ಕಿಸಬೇಕು ಎಂದರು.