

ಕಲಬುರಗಿ: ಜಗತ್ತಿನ ಎಲ್ಲ ಕಲೆಗಳಿಗೂ ಜಾನಪದ ಮೂಲವಾಗಿದ್ದು, ಇದು ಮನುಷ್ಯನ ಶ್ರಮ ಹಾಗೂ ಸಂಸ್ಕೃತಿಯಿಮದ ಜನ್ಮ ತಾಳಿದೆ ಎಂದು ಕಲಬುರಗಿ- ಯಾದಗಿರಿ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ್ ಹೇಳಿದರು.
ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನಿಂದ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಜಾನಪದ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಜಾನಪದ ಎನ್ನುವುದು ಮನುಕುಲದ ಜೀವನ. ಆದರೆ ಆಧುನಿಕತೆಯ ಭರಾಟೆಯಿಂದ ಕಲೆ ಮಾಯವಾಗುತ್ತಿದೆ. ಹೀಗಾಗಿ ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಕಲೆ ಮತ್ತು ಕಲಾವಿದರನ್ನು ಗುರುತಿಸಿ, ಗೌರವಿಸುವ ಕೆಲಸ ಪರಿಷತ್‌ನಿಂದ ನಿರಂತರವಾಗಿ ನಡೆಯುತ್ತಿದೆ. ಜಾನಪದ ಅತ್ಯಂತ ಶ್ರೀಮಂತ ಕಲೆೆ, ಕಲಾವಿದರು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಕಲೆ ಉಳಿವು, ಕಲಾವಿದರ ನೆರವಿಗೆ ಸರ್ಕಾರ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಜಾನಪದ ಕಲಾವಿದೆ ಶಕುಂತಲಾ ನಾಯಕ್ ಉದ್ಘಾಟಿಸಿದರು.
ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ರಾಜೇಂದ್ರ ಮಾಡಬೂಳ, ಎಸ್ ಕೆ ಬಿರಾದಾರ್, ಪ್ರಭುಲಿಂಗ ಮೂಲಗೆ, ವಿಶ್ವನಾಥ ತೊಟ್ನಳ್ಳಿ, ರೇವಣಸಿದ್ದಪ್ಪ ಜೀವಣಗಿ, ಸೋಮಶೇಖರ ನಂದಿಧ್ವಜ, ಎಸ್.ಎಂ ಪಟ್ಟಣಕರ್, ಪ್ರೊ.ಎಸ್.ಎಲ್.ಪಾಟೀಲ್, ನರಸಿಂಗರಾವ್ ಹೇಮನೂರ್, ಮಲ್ಲಿಕಾರ್ಜುನ ಜಾನೆ, ಶಿವಶರಣಪ್ಪ ಹಡಪದ, ಶಿವಕುಮಾರ್ ಸಿ.ಎಚ್., ಪ್ರಭವ ಪಟ್ಟಣಕರ್, ಕಲ್ಲಯ್ಯ ಸ್ಥಾವರಮಠ, ನಾಗನಾಥ ಯಳಸಂಗಿ, ಬಸವಂತರಾಯ ಕೋಳಕೂರ ಇತರರಿದ್ದರು.
ಕಲಾವಿದರಾದ ಪುಂಡಲಿಕ ಪೂಜಾರಿ, ಶರಣಪ್ಪ ದೊಡ್ಮನಿ, ದೇವೇಂದ್ರಪ್ಪ ಚಿಂಚಿನಸೂರ, ಬಾಬು ಪೂಜಾರಿ, ಲಲಿತಾಬಾಯಿ ನಾಯಕ್, ಶಂಕರಲಿAಗ ರುದ್ರವಾಡಿ, ಚಂದ್ರಕಾAತ ಡಿಗ್ಗಿ ಅವರನ್ನು ಸತ್ಕರಿಸಲಾಯಿತು.