

ಬಾಗಲಕೋಟೆ: ಪವಾಡ ಪುರುಷ ಅಲ್ಲೀಪುರ ಮಹಾದೇವ ತಾತನವರ ೩೭ ನೇ ವರ್ಷದ ಪುಣ್ಯ ಸ್ಮರಣೋತ್ಸವ ಜ.೨೧ ರಂದು ಸಂಜೆ ೬ ಗಂಟೆಗೆ ಶಿವಾನುಭವ ಸಮಿತಿ, ತಾತನವರ ಸದ್ಭಕ್ತ ಮಂಡಳಿಯಿAದ ಚರಂತಿಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ದಲಿಂಗಪ್ಪ ಹೊಸಕೇರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ೬ ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಚರಂತಿಮಠದ ಪ್ರಭುಸ್ವಾಮೀಜಿ, ನರಗುಂದ ವೀರಕ್ತಮಠದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬಿವಿವಿ ಸಂಘÀದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕಿ ಚೈತನ್ಯದೇವಿ ಗುದ್ನಯ್ಯನವರಮಠ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಕ್ಕ ರುದ್ರ ಬಳಗದ ಅಧ್ಯಕ್ಷೆ ಗಿರಿಜಕ್ಕಾ ಶೆಟ್ಟರ ವಿಶೇಷ ಆಮಂತ್ರಿತರಾಗಿ ಭಾಗವಹಿಲಿದ್ದಾರೆ ಎಂದರು.
೭ ಗಂಟೆಗೆ ತಾತಾನವರ ರಜತಮೂರ್ತಿಗೆ ಮಹಾರುದ್ರಾಭಿಷೇಕ, ಭಜನೆ, ದೀಪಾರಾಧನೆ ನಡೆಯಲಿದೆ. ಬಾಗಲಕೋಟೆ ಭಕ್ತರು ಆಗÀಮಿಸಿ ತಾತನವರ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಜಿ.ಎಸ್.ವಿಜಾಪುರ, ಪಂಡಿತ ಆರಬ್ಬಿ, ವಿಶ್ವನಾಥ ವೈಜಾಪುರ, ಎ.ಎಸ್.ಪಾವಟೆ, ಬಸವರಾಜ ಮುಕ್ಕುಪ್ಪಿ ಇತರರು ಇದ್ದರು.