ಜ.೨೦ ಹಾಗೂ ೨೧ ರಂದು ಅಧ್ಯಯನಾ ಶಿಬಿರ

bkt-19-1
Published on

ಬಾಗಲಕೋಟೆ: ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿತ) ವತಿಯಿಂದ ಜ.೨೦ ಹಾಗೂ ೨೧ ರಂದು ವಿಜಯಪುರ ಜಿಲ್ಲೆಯ ಆಲಮಟ್ಟಿಯ ಕರ್ನಾಟಕ ಗಾಂಧಿ ಹರ್ಡೆಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳ ಅಧ್ಯಯನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಕುಮಾರ ಕಾಳಣ್ಣವರ ತಿಳಿಸಿದರು. 

ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦ ರಂದು ಬೆಳಿಗ್ಗೆ ೧೧ಕ್ಕೆ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದು, ಸಕ್ಕರೆ ಸಚಿವ ಶಿವಾನಂದ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಜಯಪುರ ರಾಜ್ಯ ಸಂಘಟನಾ ಸಂಚಾಲನ ರಮೇಶ ಆಸಂಗಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮಧ್ಯಾಹ್ನ ೧೨:೩೦ಕ್ಕೆ ಹಮ್ಮಿಕೊಂಡಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಗೂ ಬೆಳವಣಿಗೆ ಗೋಷ್ಠಿಯಲ್ಲಿ ಚಿತ್ರದುರ್ಗದ ಮುಖಂಡ ಪ್ರೊ. ಸಿ.ಕೆ.ಮಹೇಶ ವಿಷಯ ಮಂಡನೆ ಮಾಡಲಿದ್ದು, ರಾಜ್ಯ ಸಂಚಾಲಕ ಮಲ್ಲೇಶ ಸಜ್ಜನ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ ೨:೩೦ಕ್ಕೆ ಹಮ್ಮಿಕೊಂಡಿರುವ ೨ನೇ ಗೋಷ್ಠಿಯಲ್ಲಿ ನಿವೃತ್ತ ಎಸಿ ಹಿರೇಹಳ್ಳಿ ಮಲ್ಲಿಕಾರ್ಜುನ ಸಮಿತಿ ಸಾಧಕ- ಬಾಧಕಗಳು, ಗುರಿ ಮತ್ತು ಜವಾಬ್ದಾರಿಗಳು ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದು ತಿಳಿಸಿದರು. 

ಮಧ್ಯಾಹ್ನ ೪ಕ್ಕೆ ಹಮ್ಮಿಕೊಂಡಿರುವ ೩ನೇ ಗೋಷ್ಠಿಯಲ್ಲಿ ಡಾ. ಸುಜಾತಾ ಚಲವಾದಿ ಅವರು ಮಹಿಳೆಯರ ಸಂರಕ್ಷಕರಾಗಿ ಅಂಬೇಡ್ಕರ್ ಹಾಗೂ ಅಂಬೇಡ್ಕರ್ ಹಾದಿಯಲ್ಲಿ ಮಹಿಳಾ ಸಬಲೀಕರಣದ ಮಾರ್ಗಗಳು ಎಂಬ ವಿಷಯದ ಕರಿತು ಮಾತನಾಡಲಿದ್ದಾರೆ ಎಂದರು. 

೨೧ ರಂದು ಬೆಳಿಗ್ಗೆ ೯:೩೦ಕ್ಕೆ ಹಮ್ಮಿಕೊಂಡಿರುವ ಗೋಷ್ಠಿಯಲ್ಲಿ ವಿಪ ಸದಸ್ಯ ಎಚ್.ಪಿ.ಸುಧಾಮದಾಸ್ ಅವರು, ಆರ್ಥಿಕ ತಜ್ಞರಾಗಿ ಅಂಬೇಡ್ಕರ್ ಪರಿಚಯ ಹಾಗೂ ದಲಿತರ ಆರ್ಥಿಕ ಸಬಲೀಕರಣದ ಆಯಾಮಗಳ ಕುರಿತು ಮಾತನಾಡಲಿದ್ದು, ಪ್ರಸ್ತುತ ದಲಿತರ ಮುಂದಿರುವ ಸಾಮಾಜಿಕ ಮತ್ತು ರಾಜಕೀಯ ಸವಾಲುಗಳ ಕುರಿತು ಬಹುಜನ ಚಿಂತಕ ಬಿ.ಗೋಪಾಲ ಮಾತನಾಡಲಿದ್ದಾರೆ ಎಂದರು.

ಮಧ್ಯಾಹ್ನ ೧:೩೦ಕ್ಕೆ ಹಮ್ಮಿಕೊಂಡಿರುವ ಸಮಾರೋಪ ಸಮಾರಂಭದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಪಾಲ್ಗೊಳ್ಳಲಿದ್ದಾರೆ. ಸಮಿತಿ ರಾಜ್ಯ ಸಂಚಾಲಕ ಹೆಣ್ಣೂರ ಶ್ರೀನಿವಾಸ ಅಧ್ಯಕ್ಷತೆ ವಹಿಸಲದ್ದಾರೆ ಎಂದು ತಿಳಿಸಿದರು.

ಮುಖಂಡರಾದ ಶಿವಾನಂದ ಬಿಸನಾಳ, ಬಾಲರಾಜ ಚೌವ್ಹಾಣ್, ಪರಶುರಾಮ ಸಣಗಿನ್, ಮಂಜು ಭಜಂತ್ರಿ ಇದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net