

ಬಾಗಲಕೋಟೆ: ಹಾವೇರಿ ನರಸೀಪುರ ಕಂಚಾರಗಟ್ಟಿಯಲ್ಲಿ ಜ.೧೪ ರಿಂದ ಎರಡು ದಿನಗಳ ಕಾಲ ಅಂಬಿಗರ ಶರಣ ಸಂಸ್ಕೃತಿ ಉತ್ಸವ ೨೦೨೫ ವಚನ ಗ್ರಂಥಗಳ ಮಹಾರಥೋತ್ಸವ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಶ್ರೀಪೀಠದ ಭಕ್ತರು ಆಗಮಿಸಬೇಕು ಎಂದು ಕುಲಪೀಠದ ಪೀಠಧಾಕ್ಷ ಶಾಂತಭೀಷ್ಮಚೌಡಯ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಿಮಿಕೇರಿ ಗ್ರಾಮದ ರಾಮರೂಢ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗುರುಪೀಠವನ್ನು ಶ್ರz್ದÁಭಕ್ತಿಯಿಂದ ಕಾಣಬೇಕು. ಗುರುಪೀಠದ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳಿ ಜೀವನ ಪಾವನವಾಗುತ್ತದೆ ಎಂದರು.
ಹಾವೇರಿ ಜಿ¯್ಲÉಯ ಸುಕ್ಷೇತ್ರ ನರಸೀಪುರ ಕಂಚಾರಗಟ್ಟಿದಲ್ಲಿ ಚೌಡಯ್ಯನ ಗದ್ದುಗೆ ಇರುವ ಸ್ಥಳದಲ್ಲಿ ೨೦೧೨ ರಲ್ಲಿ ಗುರುಪೀಠ ಸ್ಥಾಪನೆ ಮಾಡಲಾಗಿದೆ. ಈಗ ಭರ್ತಿ ೧೩ ವರ್ಷ ತುಂಬಿದೆ ಪೀಠ ಅಭಿವೃದ್ಧಿಯತ್ತ ಸಾಗಿದೆ. ಶಿಕ್ಷಣ ವಂಚಿತ ಹಿಂದುಳಿದ ಸಮಾಜ ನಮ್ಮದಾಗಿದೆ. ಹೋರಾಟದ ಮೂಲಕ ಪೀಠ ಪ್ರಾರಂಭವಾಗಿದೆ. ಗುರುಪೀಠದ ಅಭಿವೃದ್ಧಿಯನ್ನು ನಮ್ಮ ಕುಲಬಾಂಧವರು ನೋಡಬೇಕು. ರಾಜ್ಯ ಸೇರಿದಂತೆ ಆಂಧ್ರಪ್ರದೇಶ ತಮಿಳುನಾಡು ತೆಲಂಗಾನ ಸೇರಿದಂತೆ ಇನ್ನಿತರ ರಾಜ್ಯಗಳನ್ನು ಸುತ್ತಿ ಸಮಾಜ ಸಂಘಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಅಲ್ಲದೇ ರಾಜ್ಯದಲ್ಲಿ ನಾಲ್ಕು ವಲಯಗಳಲ್ಲಿ ಶಾಖಾಮಠವನ್ನು ಪ್ರಾರಂಬಿಸುವ ಉದ್ದೇಶ ಹೊಂದಲಾಗಿದೆ. ಜ.೧೪ ರಂದು ಚೌಡಯ್ಯನವರ ತೊಟ್ಟಿಲೋತ್ಸವ ಐಕ್ಯಮಂಟಪದ ಪೂಜೆ ರಕ್ತದಾನ ಶಿಬಿರ, ಸಾಮೂಹಿಕ ವಿವಾಹ, ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ಪ್ರಥಮ ಭಾರಿಗೆ ಗಂಗಾರಾತಿ ಜರುಗಲಿದೆ. ಜ.೧೫ ರಂದು ಧರ್ಮ ಧ್ವಜಾರೋಹನ ಧರ್ಮ ಸಭೆ ಚೌಡಯ್ಯನವರ ೯೦೫ ಜಯಂತೋತ್ಸವ ಹಾಗೂ ಪೂಜ್ಯ ಶಾಂತಭೀಷ್ಮಚೌಡಯ್ಯ ಸ್ವಾಮೀಜಿಗಳ ೯ ನೇಯ ಪೀಠಾರೋಹನ ವಾರ್ಷಿಕ ಮಹೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.
ಸಭೆಯಲ್ಲಿ ಸಮಾಜದ ಮಹೇಶ ಕೋಳಿ ನೌಕರ ಸಂಘದ ಜಿ¯್ಲÁಧ್ಯಕ್ಷ ಉದಯ ಅಂಬಿಗೇರ ರಾಮಣ್ಣ ರಾಮೋಡಗಿ, ರಾಮಣ್ಣ ಕಟ್ಟಿಮನಿ, ಸದಾಶಿವ ಹೊಸಮನಿ, ನರಸಪ್ಪ ಅಂಬಿಗೇರ, ಪ್ರಭು ಸುಣಗಾರ, ನಾಗಪ್ಪ ಅಂಬಿ, ಶಾಂತಪ್ಪ ಬಾಡದ, ಚಂದ್ರು ಅಂಬಿಗೇರ, ಮುತ್ತು ಜಂಬಗಿ, ಜಗದೀಶ ಅಂಬಿಗೇರ, ರಾಜು ಬಾಡದ ಸೇರಿದಂತೆ ಇತರರು ಇದ್ದರು.
========
ಬಾಗಲಕೋಟೆ ತಾಲೂಕಿನ ಸಿಮಿಕೇರಿ ಸಮೀಪದ ರಾಮಾರೂಢ ಮಠದಲ್ಲಿ ಬುಧವಾರ ಪೂರ್ವ ಭಾವಿ ಸಭೆಯಲ್ಲಿ ಅಂಬಿಗ ಸಮಾಜದ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಜಿ¯್ಲÁಧ್ಯಕ್ಷ ಮಹೇಶ ಕೋಳಿ ನೌಕರ ಸಂಘದ ಜಿ¯್ಲÁಧ್ಯಕ್ಷ ಉದಯ ಅಂಬಿಗೇರ ರಾಮಣ್ಣ ರಾಮೋಡಗಿ, ರಾಮಣ್ಣ ಕಟ್ಟಿಮನಿ, ಸದಾಶಿವ ಹೊಸಮನಿ, ನರಸಪ್ಪ ಅಂಬಿಗೇರ, ಪ್ರಭು ಸುಣಗಾರ ಇದ್ದರು.
======