ಜ.೧೪ ರಂದು ಹಾಫ ಮ್ಯಾರಾಥಾನ ಓಟ

IMG-20230110-WA0040
Published on

ಬಾಗಲಕೋಟೆ: ಹಾಫ್ ಮ್ಯಾರಾಥಾನ್ ಆರೋಗ್ಯಕ್ಕಾಗಿ ಓಟ ಎಂಬ ಧ್ಯೇಯದೊಂದಿಗೆ ಆಲ್ ಇಂಡಿಯಾ ಇನ್ಸಸ್ಟಿಟ್ಯೂಟ್ ಆಫ್ ಲೋಕಲ್ ಸೇಲ್ಸ್ ಗೌರ್ನಮೆಂಟ್, ಕರ್ನಾಟಕ ಸಫಾಯಿ ಕರ್ಮಚಾರಿ ಪರಿಷತ್ ಹಾಗೂ ಬಾಗಲಕೋಟೆ ರಿಯಲ್ ಸ್ಪೋರ್ಟ್ಸ ಅಸೋಸಿಯೇಷನ್‌ವತಿಯಿಂದ ಜ.೧೪ ರಂದು ಹಾಫ್ ಮ್ಯಾರಾಥಾನ ಓಟವನ್ನು ಆಯೋಜನೆ ಮಾಡಲಾಗಿದೆ ಎಂದು ಬಾಗಲಕೋಟೆ ರಿಯಲ್ ಸ್ಪೋರ್ಟ್ಸ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ ಸುರಪುರಮಠ ಹೇಳಿದರು.
ಈ ಹಾಫ್ ಮ್ಯಾರಾಥಾನ್ ಕಾಳಿದಾಸ ಕಾಲೇಜು ಸರ್ಕಲ್‌ದಿಂದ ಬೆಳಗ್ಗೆ ೫.೩೦ಕ್ಕೆ ಆರಂಭಗೊಂಡು ಸೀಮಿಕೇರಿ ಕ್ರಾಸ್ ವರೆಗೆ ನಡೆಯುತ್ತದೆ. ಇದರಲ್ಲಿ ಸಾವಿರಕ್ಕೂ ಹೆಚ್ಚು ಜನ ಓಟದಲ್ಲಿ ಸೇರಲಿದ್ದಾರೆ. ಮುಖ್ಯವಾಗಿ ಈ ಮ್ಯಾರಾಥಾನ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮ್ಯಾರಾಥಾನ್ ರನ್ನರ್ ಅರುಣ ಭಾರದ್ವಾಜ ಭಾಗವಹಿಸಲಿದ್ದಾರೆ. ಅವರು ಶಿರೂರ ಅಗಸಿ ಬಳಿ ಅದ್ಧೂರಿಯಾಗಿ ಸ್ವಾಗತ ಕೋರಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖಂಡರಾದ ಗೀತಾ ಗಿರಿಜಾ, ವಿದ್ಯಾ ಸರದೇಸಾಯಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net