

ಬಾಗಲಕೋಟೆ: ಬಸವ ಧರ್ಮ ಪೀಠದ ವತಿಯಿಂದ ಕೂಡಲಸಂಗಮದಲ್ಲಿ ಜ.೧೨ ರಿಂದ ೧೪ ವರೆಗೆ ಮೂರು ದಿನಗಳ ಕಾಲ ೩೮ ನೇ ಶರಣ ಮೇಳ ಆಯೋಜಿಸಲಾಗಿದೆ ಎಂದು ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಡಾ.ಮಾತೆ ಗಂಗಾದೇವಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೫ ರ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿಯನ್ನು ಮಾಜಿ ಸಚಿವ ಎಸ್.ಆರ್. ಪಾಟೀಲ ಹಾಗೂ ವೈದ್ಯ ರತ್ನ ಪ್ರಶಸ್ತಿಯನ್ನು ಇಳಕಲ್ಲದ ಹೃದಯರೋಗ ತಜ್ಞ ಡಾ.ಮಹಾಂತೇಶ ಕಡಪಟ್ಟಿಯವರಿಗೆ ನೀಡಿ ಗೌರವಿಸಲಾಗುವುದು ಎಂದರು.
೨೦೨೫ ರ ಬಸವಾತ್ಮಜೆ ರಾಷ್ಟಿçÃಯ ಪ್ರಶಸ್ತಿ ಕಲಬುರ್ಗಿ ಕ್ಯಾನ್ಸರ್ ವೈದ್ಯೆ ಡಾ.ವಿಜಯಲಕ್ಷಿ÷್ಮà ದೇಶಮಾನೆ ಅವರಿಗೆ ನೀಡಲಾಗುತ್ತಿದೆ. ಪ್ರವಚನ ಪಿತಾಮಹ ಲಿಂಗಾನAದ ಸ್ವಾಮೀಜಿ ಸ್ಮರಣಾರ್ಥ ರಾಷ್ಟç ಮಟ್ಟದ ಸ್ವಾಮಿ ಲಿಂಗಾನAದ ಪ್ರಶಸ್ತಿಯನ್ನು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಅವರಿಗೆ ನೀಡಿ ಗೌರವಿಸಲಾಗುವುದು.
ದಾಸೋಹ ರತ್ನ ಪ್ರಶಸ್ತಿ ಕೂಡಲಸಂಗಮದ ಹಿರಿಯ ಸಹಕಾರಿ ಧುರೀಣ ಎಲ್.ಎಂ. ಪಾಟೀಲ, ಸೇವಾ ರತ್ನ ಪ್ರಶಸ್ತಿ ಬೆಂಗಳೂರು ರಾಷ್ಟಿçÃಯ ಬಸವ ದಳದ ದೇವಿಕಾ ಶರಣಪ್ಪ, ಶರಣ ರತ್ನ ಪ್ರಶಸ್ತಿ ಗೋಕಾಕದ ಕಮಲಕ್ಕ ಚೌಧರಿ, ಸಂಸ್ಕಾರ ರತ್ನ ಪ್ರಶಸ್ತಿ ಬೀದರದ ಸುರೇಶ ಸ್ವಾಮಿ, ಸೇವಾ ರತ್ನ ಪ್ರಶಸ್ತಿ ಕೊಪ್ಪಳದ ಬಸವನಗೌಡ ಪಾಟೀಲ ಅವರಿಗೆ ನೀಡಿ ಸನ್ಮಾ ನಿಸಲಾಗುವುದು. ಒಕ್ಕಲಿಗ ಮುದ್ದಣ್ಣನ ಸ್ಮರಣಾರ್ಥ ೨೦೨೫ ರ ರಾಷ್ಟç ಮಟ್ಟದ ಪ್ರಮುಖ ಪ್ರಜೆ ಪ್ರಶಸ್ತಿ ಚಿತ್ರದುರ್ಗದ ಬಸವ ರಡ್ಡಿ, ಕಾಯಕ ಕಲಿ ಪ್ರಶಸ್ತಿ ಬಸವ ಯೋಗೇಶ ಅವರಿಗೆ ನೀಡ ಗೌರವಿಸಲಾಗುವುದು.
ಜ.೧೨ ರಂದು ಬೆಳಗ್ಗೆ ೧೦.೩೦ ಕ್ಕೆ ರಾಷ್ಟಿçÃಯ ಬಸವ ದಳದ ೩೪ ನೇ ಅಽವೇಶನ ನಡೆಯಲಿದ್ದು, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಇಳಕಲ್ಲ ಗುರುಮಹಾಂತ ಸ್ವಾಮೀಜಿ, ರಬಕವಿ ಗುರುಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಜೆ ೬.೩೦ ಗಂಟೆಗೆ ಮಹಿಳಾ ಗೋಷ್ಠಿ ಸಮಾರಂಭ ಜಿಲ್ಲಾಽಕಾರಿ ಜಾನಕಿ ಕೆ.ಎಂ ಉದ್ಘಾಟಿಸಲಿದ್ದಾರೆ. ಕೂಡಲ ಸಂಗಮ ಲಿಂಗಾಯತ ಪಂಚಮ ಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಬ್ಬಳ್ಳಿಯ ಚಂದ್ರಶೇಖರ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಬಸವಕಲ್ಯಾಣದ ಡಾ.ಗಂಗಾAಬಿಕೆ ಸಾನ್ನಿಧ್ಯ ವಹಿಸಲಿದ್ದಾರೆ.
ಜ.೧೩ ರಂದು ಬೆಳಗ್ಗೆ ೧೦.೩೦ ಕ್ಕೆ ೩೮ ನೇ ಶರಣ ಮೇಳ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ವಿಜಯಾನಂದ ಕಾಶಪ್ಪನವರ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಚಿವರಾದ ಸತೀಶ ಜಾರಕಿಹೊಳಿ, ಸಂತೋಷ ಲಾಡ್, ಆರ್.ಬಿ.ತಿಮ್ಮಾಪುರ, ಸಂಸದ ಸಾಗರ ಖಂಡ್ರೆ ಆಗಮಿಸಲಿದ್ದಾರೆ. ಸಂಜೆ ೬ ಕ್ಕೆ ಬಸವ ಧರ್ಮ ಪೀಠಾರೋಹಣ ಸಮಾರಂಭ ನಡೆಯಲಿದ್ದು, ಲೋಕಾಯುಕ್ತ ಬಿ.ಎಸ್.ಪಾಟೀಲ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಆಗಮಿಸಲಿದ್ದಾರೆ ಎಂದರು.
ಜ.೧೪ ರ ಬೆಳಗ್ಗೆ ೧೦.೩೦ ಗಂಟೆಗೆ ಸಮುದಾಯ ಪ್ರಾರ್ಥನೆ ಮತ್ತು ವಚನ ಪಠಣ ಸಮಾರಂಭ ಸಂಸದ ಜಗದೀಶ ಶೆಟ್ಟರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಮಹೇಶ ಟೆಂಗಿನಕಾಯಿ ಆಗಮಿಸಲಿದ್ದಾರೆ.
ಬಸವ ಧರ್ಮ ಪೀಠದ ಉಪಾಧ್ಯಕ್ಷ ಮಹಾದೇಶ್ವರ ಸ್ವಾಮೀಜಿ, ಬಸವಯೋಗಿ ಸ್ವಾಮೀಜಿ, ಪ್ರಭುಲಿಂಗ ಸ್ವಾಮೀಜಿ, ಅನಿಶಾನಂದ ಸ್ವಾಮೀಜಿ ಇದ್ದರು.