ಜ.6 ರಂದು ಬೀಳೂರ ಗುರುಬಸವ ಮಹಾಸ್ವಾಮಿಗಳ ಕಾರ್ತಿಕೋತ್ಸವ

bkt-8-5
ಬೀಳೂರು ಗುರುಬಸವ ಮಹಾಸ್ವಾಮಿಗಳ
Published on

ಬಾಗಲಕೋಟೆ: ನಗರದ ಬಸವವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಬೀಳೂರು ಗುರುಬಸವ ಮಹಾಸ್ವಾಮಿಗಳ ಕಾರ್ತಿಕೋತ್ಸವ ಜ.೯ ರಂದು ಸಂಜೆ ೬ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಬಿವಿವಿ ಸಂಘದ ಬೀಳೂರು ಗುರುಬಸವ ಮಹಾಸ್ವಾಮಿಗಳ ಉತ್ಸವ ಸಮಿತಿಯಿಂದ ಜರುಗುವ ಕಾರ್ತಿಕೋತ್ಸವದಲ್ಲಿ ಬೆಳಗಿನ ಜಾವ ಬೀಳೂರ ಅಜ್ಜನ ಪ್ರತಿಮೆಗೆ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪಂಚಾಕ್ಷರಿ ಮಂತ್ರ ಪಠಣ, ಶಿವಸ್ತೋತ್ರ, ಶಿವನಾಮ ಜಪ ಹಾಗೂ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರುತಿ ಜರುಗುವುದು.

ಸಂಜೆ ೬ ಗಂಟೆಗೆ ಕಾರ್ತಿಕೋತ್ಸವ ನಿಮಿತ್ತ ಸಾವಿರಾರು ದೀಪಗಳಿಂದ ದೀಪೋತ್ಸವ ಜರುಗಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಜ್ಜನ ಕೃಪೆಗೆ ಪಾತ್ರರಾಗಬೇಕು ಎಂದು ಬೀಳೂರು ಗುರುಬಸವ ಮಹಾಸ್ವಾಮಿಗಳ ಉತ್ಸವ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net