

ಬಾಗಲಕೋಟೆ: ಇಲ್ಲಿನ ಕೆಂಪುರೋಡ ಬಳಿ ಬರುವ ಪಂಚಮುಖಿ ಆಂಜನೇಯ ದೇವಸ್ಥಾನದ ಜೀರ್ಣೋದ್ಧಾರ ವಾರ್ಷಿಕೋತ್ಸವದ ಅಂಗವಾಗಿ ಜ.21 ಹಾಗೂ ಜ.22 ರಂದು ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.
ಜ.21 ರಂದು ಮಂಗಳವಾರ ಬೆಳಗ್ಗೆ 9 ಗಂಟೆಗೆ ಕುಂಭಮೇಳ ನಡೆಯಲಿದ್ದು, 500 ಕ್ಕೂ ಹೆಚ್ಚು ಸುಮಂಗಲಿಯರು ಭಾಗವಹಿಸಲಿದ್ದಾರೆ. ಹೊಳೆ ಆಂಜನೇಯ ದೇವಸ್ಥಾನದಿಂದ ಆರಂಭವಾಗುವ ಕುಂಭ ಮೇಳ ಮೆರವಣಿಗೆ ಬಸವೇಶ್ವರ ವೃತ್ತ, ಕುಮಟಗಿ ಶೋ ರೂಂ, ಲಕ್ಷ್ಮೀ ನಗರ, ಧನುಷ್ ಆಸ್ಪತ್ರೆ, ಧರ್ಮೂ ಕ್ರಾಸ್ ಮೂಲಕ ಪಂಚಮುಖಿ ಆಂಜನೇಯ ದೇವಸ್ಥಾನ ತಲುಪಿ ಮುಕ್ತಾಯಗೊಳ್ಳಲಿದೆ.
ಜ. 22 ರಂದು ಬೆಳಗ್ಗೆ 6 ಗಂಟೆಗೆ ಕೆರೂರ ಚರಂತಿಮಠದ ಡಾ.ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಗುಳೇದಗುಡ್ಡ ಅಮರೇಶ್ವರ ಮಠದ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಕೊಣ್ಣೂರ ಡಾ.ಶಿವಾನಂದ ಮಹಾಸ್ವಾಮಿಗಳು ಎಕಾದಶ ರುದ್ರ ಹೋಮ, ಶಿವ ಶಕ್ತಿ ಪೂಜೆ, ಮಹಾರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಅನ್ನ ಪ್ರಸಾದ ಜರುಗಲಿದೆ. ಎರಡು ದಿನಗಳ ಕಾಲ ಆಂಜನೇಯ ದೇವರಿಗೆ ವಿಶೇಷ ಪೂಜೆ, ಅಭಿಷೇಕ , ಮಹಾ ನೈವೇದ್ಯ ನಡೆಯಲಿದ್ದು, ಸದ್ಬಕ್ತರು ಆಗಮಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜ ಕಟಗೇರಿ ಹಾಗೂ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.