ಛಾವಣಿ ಅಳವಡಿಕೆ ಕಾಮಗಾರಿಗೆ ಚಾಲನೆ

24.npk-1
Published on

ನಾಪೋಕ್ಲು: ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗುತಪ್ಪ ದೇವರ ಸನ್ನಿಧಿಯಲ್ಲಿ ಭಕ್ತ ಜನ ಸಂಘದ ವತಿಯಿಂದ ಛಾವಣಿ ಅಳವಡಿಕೆ ಕಾಮಗಾರಿಗೆ ಬುಧವಾರ ಚಾಲನೆ ನೀಡಲಾಯಿತು.

ದೇವಾಲಯದ ಮುಖ್ಯ ದ್ವಾರದಿಂದ ನಾಗನಕಟ್ಟೆಯವರೆಗೆ 12 ಲಕ್ಷ ರೂ. ವೆಚ್ಚದಲ್ಲಿ ಏರುಗತಿಯ ಹಾದಿಗೆ ಬಿಸಿಲು ಮಳೆಯಿಂದ ಭಕ್ತರ ರಕ್ಷಣೆಗಾಗಿ ಹಾದಿಯುದ್ಧಕ್ಕೂ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಮತ್ತು ಹೆಂಚಿನ ಛಾವಣಿ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಸನ್ನಿಧಿಯ ಮುಖ್ಯ ದ್ವಾರದಿಂದ ನಾಗನಕಟ್ಟೆಯವರೆಗಿನ ಪ್ರದೇಶಕ್ಕೆ ಮಳೆಗಾಲದಲ್ಲಿ ಏರುಗತಿಯ ದಾರಿಯಲ್ಲಿ ಪಾಚಿಗಟ್ಟಿ ಜಾರುವುದರಿಂದ ಭಕ್ತರು ನಡೆದಾಡಲು ಕಷ್ಟವಾಗಿತ್ತು. ಇದನ್ನು ಮನಗಂಡ ಭಕ್ತರು ಜನ ಸಂಘದ ಪದಾಧಿಕಾರಿಗಳು ಯೋಜನೆ ರೂಪಿಸಿ ಛಾವಣಿ ನಿರ್ಮಿಸಲು ನಿರ್ಧರಿಸಿದ್ದರು. ಭಕ್ತ ಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಕಾಮಗಾರಿಗೆ ಚಾಲನೆ ನೀಡಿದರು.

ಭಕ್ತ ಜನಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಾಜ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೊಂದಮ್ಮ ಮೇದಪ್ಪ, ಖಜಾಂಚಿ ಅಂಜಪರವಂಡ ಕುಶಾಲಪ್ಪ, ನಿರ್ದೇಶಕರಾದ ಪರದಂಡ ಸದಾ ನಾಣಯ್ಯ, ಕುಲೇಟೀರ ಅರುಣ್ ಬೇಬ, ಕುಲೇಟೀರ ರಂಜನ್, ಕಂಬೆಯಂಡ ಬೊಳ್ಳಪ್ಪ, ಕಂಬೆಯಂಡ ಗಣೇಶ್, ಅರ್ಚಕ ಜಗದೀಶ್ ಪ್ರಸಾದ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net