ಛಾಯಾಗ್ರಾಹಕರ ವೃತ್ತಿ ಶ್ರೇಷ್ಠ

photo
ಎನ್.ಆರ್.ಪುರದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಬಸ್ತಿಮಠದ ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಎಂ.ಒ.ಜೋಯಿ, ಸಾಜು, ಅಜೇಯ್, ಗಿರಿರಾಜ್, ಪುನಿತ್ ಇದ್ದರು.
Published on

ಎನ್.ಆರ್.ಪುರ: ಪ್ರತಿಯೊಬ್ಬರ ನೆನಪುಗಳನ್ನು ಶಾಶ್ವತವಾಗಿ ಇರುವಂತೆ ಮಾಡುವ ಛಾಯಾಗ್ರಾಹಕರ ವೃತ್ತಿ ಶ್ರೇಷ್ಠವಾದದ್ದು ಎಂದು ಬಸ್ತಿಮಠದ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಛಾಯಾಗ್ರಹಣ ದಿನಾಚರಣೆ ಅಂಗವಾಗಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಶನಿವಾರ ಬಸ್ತಿಮಠದ ಶ್ರೀ ಜ್ವಾಲಾಮಾಲಿನಿ ಅಮ್ಮನವರಿಗೆ ಸಲ್ಲಿಸಿದ ವಿಶೇಷ ಪೂಜೆ ಸಂದರ್ಭದಲ್ಲಿ ಆಶೀರ್ವಚನ ನೀಡಿ, ಛಾಯಾಗ್ರಹಣ ಎಂಬುವುದು ಒಂದು ವಿಶಿಷ್ಟ ಕಲೆ. ಛಾಯಾಗ್ರಾಹಕರಿಗೆ ಪರಿಸರದ ಕಾಳಜಿವೂ ಇದೆ ಎಂದರು.
ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಸಾಜು ಮಾತನಾಡಿ, ಸಂಘವು ಸಾಮಾಜಿಕ ಕಳಕಳಿಯ ಕಾರ್ಯ ಮಾಡುತ್ತಾ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಿದೆ. ಇಂದು ಮೊಬೈಲ್‌ಗಳ ಹಾವಳಿಯಿಂದ ಛಾಯಾಗ್ರಾಹಕ ವೃತ್ತಿಗೆ ಬರೆ ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಅಜೇಯ್ ಮಾತನಾಡಿ, ವಿಶ್ವ ಛಾಯಾಗ್ರಹಣ ದಿನಾಚರಣೆಯ ಕಾರ್ಯಕ್ರಮವನ್ನು ಆ.27 ರಂದು ಛಾಯಾಗ್ರಾಹಕರ ಕುಟುಂಬದವರು ಸೇರಿ ವಿಶೇಷವಾಗಿ ಆಚರಿಸಲಾಗುವುದು ಎಂದರು.
ಸಂಘದ ಎಲ್ಲಾ ಸದಸ್ಯರು ಜ್ವಾಲಾಮಾಲಿನಿ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದು ಸದಸ್ಯರಿಗೆ ಗಿಡಗಳನ್ನು ವಿತರಿಸಲಾಯಿತು. ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಂ.ಒ.ಜೋಯ್, ಪೂರ್ವಾಧ್ಯಕ್ಷ ಶೆರ್ಲಿವಿಜು, ಗಿರಿರಾಜ್, ಮೇಘಗಿರಿ, ಖಜಾಂಚಿ ಜೋಬಿ, ಸಂಘಟನಾ ಕಾರ್ಯದರ್ಶಿ ಪ್ರವೀಣ್, ಪದಾಧಿಕಾರಿಗಳಾದ ಭರತ್, ಪುನಿತ್, ಅರ್ಜುನ್, ಗೀತಾಂಜಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net