ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

bkt-22-1
ಬಾಗಲಕೋಟೆ ನಗರದ ಶಿವಾನಂದ ಜಿನ್ ದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಶಿವಾಜಿ ಮಹಾರಾಜರ ೩೯೫ ನೇ ಜಯಂತಿ ಆಚರಿಸಲಾಯಿತು.
Published on

ಬಾಗಲಕೋಟೆ: ಇಲ್ಲಿನ ನಗರ ಶಿವಾನಂದ ಜಿನ್ ದಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಕ್ಷ ಬಾಗಲಕೋಟೆ ಮತಕ್ಷೇತ್ರದಿಂದ ಈಚೆಗೆ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ೩೯೫ ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬಸವರಾಜ ಯಂಕAಚಿ, ಗುಂಡುರಾವ ಶಿಂದೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜ ನ್ಯಾಯ, ನಿಷ್ಠೆ, ಧರ್ಮ, ದೇಶಕ್ಕಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಅವರ ಇತಿಹಾಸ ತಿಳಿಸಿಕೊಡಬೇಕು. ತನ್ಮೂಲಕ ಉತ್ತಮ ನಿರ್ಮಿಸಲು ಕೈ ಜೋಡಿಸಬೇಕು ಎಂದರು.

ಜಿಲ್ಲಾ ಶಿಕ್ಷಣ ಪ್ರಕೋಷ್ಠದ ಸಹ ಸಂಚಾಲಕ ಅಂಬರೀಶ ಗೊಂದಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಪ್ರಧಾನ ಕಾರ್ಯದರ್ಶಿ ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ, ನಗರಸಭೆ ಅಧ್ಯಕ್ಷ ಸವಿತಾ ಲಂಕೆನ್ನವರ, ಸಭಾಪತಿ ಯಲ್ಲಪ್ಪ ನಾರಾಯಣಿ, ನಗರಸಭೆ ಸದಸ್ಯ ಬಸವರಾಜ ಅವರಾದಿ, ಮುಖಂಡರಾದ ಎಂ.ಆರ್.ಶಿAಧೆ, ರಾಜು ವಾಘ, ತಾನಾಜಿ ಜಮಖಂಡಿ, ಸುಜಾತಾ ಶಿಂಧೆ, ಡಾ.ಎಂ.ಎಸ್.ದಡ್ಡೆನ್ನವರ, ಭಾಗೀರಥಿ ಪಾಟೀಲ, ಅಶೋಕ ಪವಾರ, ಶಿವಾನಂದ ಟವಳಿ, ಶಶಿಕಲಾ ಮಜ್ಜಿಗಿ, ರಾಘವೇಂದ್ರ ಕುಲಕರ್ಣಿ, ಶಂಕರ ಗಲಗ, ಸಂಗನಗೌಡ ಗೌಡರ, ಶಶಿ ಗುತ್ತಣ್ಣವರ, ಡಾ.ರವಿ ಕೋಟೆನ್ನವರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net