ಚ್ಯುತಿ ಬಾರದಂತೆ ನಡೆದುಕೊಳ್ಳಿ

Doctor
Published on

ಕಲಬುರಗಿ: ಪಾರಂಪರಿಕ ವೈದ್ಯ ಪದ್ಧತಿಗೆ ತನ್ನದೇ ಆದ ಶಕ್ತಿ ಇದ್ದು, ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು ಎಂದು ಅಫಜಲಪುರ ಹಿರೇಮಠ ಸಂಸ್ಥಾನದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.

ಭವಾನಿ ನಗರದ ಬಬಲಾದಿ ಮಠದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಮಂಗಳವಾರ ಆಯೋಜಿಸಿದ್ದ ವೈದ್ಯ ಪಾರಂಪರಿಕ ಜಿಲ್ಲಾ ಸಮಾವೇಶದಲ್ಲಿ ನೇತೃತ್ವ ವಹಿಸಿದ್ದ ಅವರು, ಅನಾದಿ ಕಾಲದಿಂದಲೂ ಪಾರಂಪರಿಕ ವೈದ್ಯ ಪದ್ಧತಿಯಲ್ಲಿ ಗಿಡದ ಹೆಸರು ಹೇಳಬಾರದೆಂಬ ಮಾತಿದೆ. ಅಂತಲೇ ಔಷಧಕ್ಕೆ ಬಳಸುವ ಗಿಡದ ಹೆಸರು ಹೇಳುತ್ತಿರಲಿಲ್ಲ. ಆ ಗಿಡವನ್ನು ಹಾಳು ಮಾಡಬಹುದು ಎಂಬ ಕಾರಣಕ್ಕೆ ಹೀಗೆ ಹೇಳಲಾಗುತ್ತಿತ್ತು. ಈಗಲೂ ಅಂತಹ ರಹಸ್ಯ ಕಾಪಾಡುವ ಅಗತ್ಯವಿಲ್ಲ. ಆಸಕ್ತರಿಗೆ ಗಿಡದ ಹೆಸರು ಪರಿಚಯ ಮಾಡಿಕೊಡುವ ಮೂಲಕ ಈ ಪದ್ಧತಿ ನಿರಂತರ ಮುಂದುವರಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, ಔಷಧಕ್ಕೆ ಬಳಸುವ ಗಿಡ ಬೆಳೆಸಲು ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಶಿವಶಕ್ತಿ ಪೀಠದ ಜಗದ್ಗುರು ಶ್ರೀ ಬಸವಪ್ರಸಾದ ಸ್ವಾಮೀಜಿ ಸಾನ್ನಿಧ್ಯ ಹಾಗೂ ಕಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಆನಂದ ಹೆರೂರ್ ಅಧ್ಯಕ್ಷತೆ ವಹಿಸಿದ್ದರು.

ಹಿಂಗುಲಾಂಬಿಕಾ ಆಯುರ್ವೇದ ಮೆಡಿಕಲ್​ ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರಾಧ್ಯಾಪಕಿ ಡಾ.ನಿರ್ಮಲಾ ಕೆಳಮನಿ ಮಾತನಾಡಿದರು.
ಶ್ರೀ ಹೊನ್ನಲಿಂಗ ಮಹಾಸ್ವಾಮೀಜಿ, ಶ್ರೀ ಉದಯರಾಜ ಯೋಗೇಂದ್ರ ಸ್ವಾಮೀಜಿ, ಸೈಯದ್ ಮಝದ್ದೀನ್ ಮದನಿ ಶಹಾ ಅಜೀಜಿ, ಗಿರಿಜಾ ಎಸ್.ಯು, ಬಸವರಾಜ ದೇಗಲಮಡಿ, ರಮೇಶ ಗಂಜಿ, ಲತೀಫ್ ಪಟೇಲ್, ಮಲ್ಲಿಕಾರ್ಜುನ ಜನವಾಡ, ಗಂಗಾಧರ ವಿಶ್ವಕರ್ಮ, ಸುರೇಶ ಕುಲಕರ್ಣಿ, ಗಿರೀಶ ಮಹಾರಾಜ, ಮಕ್ತುಮ್ ಪಟೇಲ್, ಭೀಮಣ್ಣ ಆಚಾರ್ಯ, ಶಿವಣ್ಣ ಮಾಗಳ, ಶರಣಪ್ಪ ಮಾಗಳ, ಶರಣಪ್ಪ ಇತರರಿದ್ದರು. ಕುಮಾರಸ್ವಾಮಿ ಕಸಬಾ ಲಿಂಗಸೂಗೂರು ಪ್ರಾಸ್ತಾವಿಕ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net