

ಬಾಗಲಕೋಟೆ: ಚೈತ್ರಾ ಕುಂದಾಪುರ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಡೀಲ್ ಪ್ರಕರಣದ ಹಿಂದೆ ಬಿಜೆಪಿ ನಾಯಕರೊಬ್ಬರು ಇರಬಹುದು ಎಂದಿದ್ದ ಮತ್ತೊಬ್ಬ ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.
ಇರಬಹುದು, ಅದಕ್ಕಾಗಿಯೇ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಂತಿಮವಾಗಿ ಚಾರ್ಜ ಶೀಟ್ ಸಲ್ಲಿಸಿದ ಬಳಿಕ ಎಲ್ಲವು ಬಹಿರಂಗವಾಗಲಿದೆ. ಅಲ್ಲಿವರೆಗೂ ಕಾಯಬೇಕು ಎಂದಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ಆ ಭಾಗದಲ್ಲಿ ನಡೆದಿರುವುದು. ಯಾರಿಗೆ ಮೋಸ ಮಾಡಿದ್ದಾರೋ? ಯಾರ ದುಡ್ಡು ತಿಂದಿದ್ದಾರೋ? ಚಾರ್ಜ್ ಶೀಟ್ ಆಗುವವರೆಗೂ ಕಾಯಬೇಕು. ಪ್ರಕರಣದಲ್ಲಿ ಯಾರೇ ಇದ್ದರೂ ಮರ್ಜಿ ಕಾಯುವ ಅವಶ್ಯಕತೆ ಇಲ್ಲ. ಪೊಲೀಸರು ಯಾರನ್ನೂ ಬಿಡುವುದಿಲ್ಲ. ದಾಖಲೆಗಳು ಸಿಕ್ಕರೆ ಕ್ರಮ ತೆಗೆದುಕೊಳ್ಳಲೇಬೇಕಾಗುತ್ತದೆ ಎಂದು ಹೇಳಿದರು.