

ಕಲಬುರಗಿ : ಭಾರತೀಯ ಯುವ ಕಾಂಗ್ರೆಸ್ ರಾಷ್ಟಿö್ರÃಯ ಮಾಧ್ಯಮ ಸಂಯೋಜಕರಾದÀ ಚೇತನ್ ಗೋನಾಯಕ ಅವರಿಗೆ ತೆಲಂಗಾಣ ರಾಜ್ಯದ ಜತೆಗೆ ಮಹಾರಾಷ್ಟç ಪ್ರದೇಶ ಮತ್ತು ಮುಂಬಯಿ ಪ್ರದೇಶ ಯುವ ಕಾಂಗ್ರೆಸ್ಸಿನ ಮಾಧ್ಯಮ ಮತ್ತು ಸಂವಹನ ಉಸ್ತುವಾರಿಯಾಗಿ ನೇಮಕವಾಗಿದ್ದಾರೆ. ಈ ಮೂಲಕ ಕಲಬುರಗಿಯ ಯುವಕನೊಬ್ಬ ಯುವ ಕಾಂಗ್ರೆಸ್‌ನಲ್ಲಿ ಮಹತ್ವದ ಸಾಧನೆ ಮಾಡಿದಂತಾಗಿದೆ.
ಗೋನಾಯಕ ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಸಕ್ರಿಯ ಕಾರ್ಯನಿರ್ವಹಿಸಿ ರಾಷ್ಟç ಮತ್ತು ರಾಜ್ಯ ನಾಯಕರ ಗಮನ ಸೆಳೆದಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೂ ಚುರುಕಿನ ಕಾರ್ಯವೈಖರಿ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಾಗೂ ನಾಯಕ ರಾಹುಲ್ ಗಾಂಧಿ ಗಮನ ಸೆಳೆದಿದ್ದರು.
ಕಾರ್ಯವೈಖರಿಯನ್ನು ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟಿçÃಯ ಅಧ್ಯಕ್ಷರಾದ ಶ್ರೀನಿವಾಸ ಬಿ.ವಿ ಮತ್ತು ಮಾಧ್ಯಮ ಉಸ್ತುವಾರಿ ವರುಣ ಪಾಂಡೆ ಅವರು ಚೇತನ ಅವರಿಗೆ ಹೆಚ್ಚುವರಿಯಾಗಿ ಮಹಾರಾಷ್ಟö್ರ ಮತ್ತು ಮುಂಬೈ ಉಸ್ತುವಾರಿ ವಹಿಸಿ ಸೋಮವಾರ ಆದೇಶ ಹೊರಡಿಸಿದ್ದಾರೆ