

ಮೇಲುಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನರಕ ಚತುರ್ದಶಿಯಂದು ಮೇಲುಕೋಟೆಗೆ ಆಗಮಿಸಿ ಶ್ರೀ ಚೆಲುವನಾರಾಯಣಸ್ವಾಮಿ ದರ್ಶನ ಪಡೆದರು.
ಸ್ಥಾನಾಚಾರ್ಯ ಹಾಗೂ ಪಾರುಪತ್ತೇಗಾರ್ ಶ್ರೀನಿವಾಸ ನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ಮೂಲಮೂರ್ತಿ, ಉತ್ಸವಮೂರ್ತಿ ಮಹಾಲಕ್ಷ್ಮೀ, ರಾಮಾನುಜಾಚಾರ್ಯರ ದರ್ಶನ ಪಡೆದರು. ಇದೇ ವೇಳೆ ದೇವಾಲಯದ ರಾಜಗೋಪುರದ ಬಳಿ ನೂತನವಾಗಿ ಭಕ್ತರಿಗಾಗಿ ಆರಂಭಿಸಿರುವ ಲಡ್ಡು ಪ್ರಸಾದ ಮಾರಾಟವನ್ನು ಉತ್ತೇಜಿಸಲು ಲಾಡು ಖರೀದಿಸಿ ಭಕ್ತರಿಗೆ ವಿತರಿಸಿದರು. ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್, ಇಒ ಶೀಲಾ, ಕೆಪಿಸಿಸಿ ಸದಸ್ಯ ಎಚ್ ತ್ಯಾಗರಾಜು, ಡೇರಿ ಅಧ್ಯಕ್ಷ ಕಾಡೇನಹಳ್ಳಿ ರಾಮಚಂದ್ರು, ರಾಮಾನುಜರ ಸನ್ನಿಧಿಯ ಅರ್ಚಕ ಆನಂದಾಳ್ವಾರ್ ಇದ್ದರು.