ಚೆಕ್‌ಪೋಸ್ಟಗಳಿಗೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

bkt-3-1
Published on

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ಮತ್ತು ಹುನಗುಂದ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾದ ವಿವಿಧ ಚೆಕ್‌ಪೋಸ್ಟಗಳಿಗೆ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿಗಳು ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾಗಲಕೋಟೆ ಮತಕ್ಷೇತ್ರದ ಹೊನ್ನಾಕಟ್ಟಿ, ಕಮತಗಿ ಚೆಕ್‌ಪೋಸ್ಟ ಮತ್ತು ಹುನಗುಂದ ಮತಕ್ಷೇತ್ರದ ಗುಗ್ಗಲಮರಿ ಚೆಕ್‌ಪೋಸ್ಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಚೆಕ್‌ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯವೈಖರಿ, ತಪಾಸಣೆ ಮಾಡಲಾದ ವಾಹನಗಳ ಮಾಹಿತಿಯನ್ನು ಪಡೆದುಕೊಂಡರು.

ಜಿಲ್ಲಾಡಳಿತ ಭವನದಲ್ಲಿರುವ ಜಿ.ಪಂ ಸಭಾಭವನದಲ್ಲಿ ಸ್ಥಾಪಿಸಲಾಗಿರುವ ಜಿಲ್ಲಾ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಚೆಕ್‌ಪೋಸ್ಟಗಳ ಮೇಲೆ ಕಣ್ಗಾವಲು, ಸಿ-ವಿಜಿಲ್ ಆ್ಯಪ್ ಮೂಲಕ ಮತ್ತು ಸಹಾಯವಾಣಿ ಸಂಖ್ಯೆ ೧೯೫೦ಗೆ ಕರೆಗಳ ಮೂಲಕ ದೂರು ಸ್ವೀಕಾರ, ವಿದ್ಯುನ್ಮಾನ, ಮುದ್ರಣ ಮಾದ್ಯಮ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸಾರವಾಗುವ ಸುದ್ದಿಗಳ ಪರಿಶೀಲನೆ ಕಾರ್ಯಗಳನ್ನು ವೀಕ್ಷಣೆ ಮಾಡಿ ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net